ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ ನೆರವು : ನಿರ್ಮಲಾ ಸೀತಾರಾಮನ್.

162
firstsuddi

ನವದೆಹಲಿ : ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ, ದೇಶದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ್ದಾರೆ. ಹಣಕಾಸು ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ತಂಡ ಇನ್ನೂ 3-4 ದಿನಗಳ ಕಾಲ ಆರ್ಥಿಕ ಪ್ಯಾಕೇಜ್ ಕುರಿತು ವಿವರಣೆ ನೀಡಲಿದ್ದು, ಈ ಎಲ್ಲಾ ಆರ್ಥಿಕ ಪ್ಯಾಕೇಜ್ ಲಾಭಗಳು ನಾಳೆಯಿಂದ ಜಾರಿಗೆ ಬರಲಿದ್ದು, 2021ನೇ ಮಾರ್ಚ್ ವರೆಗೂ ಚಾಲ್ತಿಯಲ್ಲಿರುತ್ತದೆ

• ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಜಾಮೀನು ರಹಿತ ಸಾಲ ನೀಡಲು ನಿರ್ಧರಿಸಲಾಗಿದ್ದು, ಆಗಸ್ಟ್ 31ರವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ. MSMEಗಳಿಗೆ ಯಾವುದೇ ಅಡಮಾನಲ್ಲದೇ ಸಾಲ ಕೊಡಲು ನಿರ್ಧರಿಸಲಾಗಿದ್ದು, ಇದರಿಂದ 45 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ದೇಶದಲ್ಲಿ 25-100 ಕೋಟಿ ವಹಿವಾಟುಗಳಿರುವ ಸಣ್ಣ ಕಂಪನಿಗಳಿಗೆ ಇದರಿಂದಾಗಿ ನೆರವು ಹಾಗೂ ಇದರೊಂದಿಗೆ MSMEಗಳಿಗೆ ಆರು ಪ್ರಮುಖ ರಿಲೀಫ್ಗಳನ್ನ ನೀಡಲಾಗಿದೆ. ಬ್ಯಾಂಕುಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಶ್ಯೂರಿಟಯಾಗಲಿದೆ.
• ಆದಾಯ ತೆರಿಗೆ ಪಾವತಿ ಮಾಡಲು ಅ.31ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದ 5 ಲಕ್ಷಕ್ಕಿಂತ ಕಡಿಮೆ ಆದಾಯದ 14 ಲಕ್ಷ ಜನರಿಗೆ ಅನುಕೂಲವಾಗಲಿದೆ. ಧಾರ್ಮಿಕೇತರ ಸಂಸ್ಥೆಗಳಿಗೆ ಆದಾಯ ತೆರಿಗೆ ಪಾವತಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುವವರಿಗೆ ಈಗಾಗಲೇ ಐಟಿ ರಿಫಂಡ್ ಆಗಿದೆ.
• ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಅವಕಾಶ ನೀಡಲಾಗುವುದು. ಮಾ.31 ರಿಂದ 6 ತಿಂಗಳವರೆಗೆ ನೋಂದಣಿ ಅವಧಿ ವಿಸ್ತರಣೆ ಮಾಡಲಾಗುವುದು. ಇದರಿಂದ ಡೆವಲಪರ್ಸ್, ರಿಯಲ್ ಎಸ್ಟೇಟ್ ಇಂಡಸ್ಟ್ರಿಗೆ ಅನುಕೂಲವಾಗಲಿದೆ. ಬಾಕಿ ಉಳಿದಿರುವ ಯೋಜನೆಗಳನ್ನು ಮುಗಿಸಲು ರಿಯಲ್ ಎಸ್ಟೇಟ್ ಇಂಡಸ್ಟ್ರಿಗೆ 6 ತಿಂಗಳು ಕಾಲವಕಾಶ ನೀಡಲಾಗಿದೆ.
• ಟಿಡಿಎಸ್/ಟಿಸಿಎಸ್ ಶೇಕಡಾ 25 ರಷ್ಟು ಕಡಿತಗೊಳಿಸಲಾಗಿದ್ದು, ಇದರಿಂದ 50 ಸಾವಿರ ಕೋಟಿ ಉಳಿತಾಯವಾಗಲಿದೆ.
• ಮುಂದಿನ ಮೂರು ತಿಂಗಳು ಎಟಿಎಂಗಳಲ್ಲಿ ಹಣ ವಿತ್‍ಡ್ರಾ ಮಾಡಲು ಶುಲ್ಕ ವಿಧಿಸುವುದಿಲ್ಲ.
• ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ಪ್ಯಾಕೇಜ್ ಘೋಷಣೆಯಾಗಿದ್ದು, ಇದರಿಂದ ವಿದ್ಯುತ್ ಸರಬರಾಜು, ಉತ್ಪಾದನಾ ಕಂಪನಿಗಳಿಗೆ ಅನುಕೂಲವಾಗಲಿದೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಿರುವ ಗ್ಯಾರಂಟಿ ಮೂಲಕ ಹಣ ಪಾವತಿಸಲಾಗುವುದು. ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ನೀಡಿರುವ ಬಾಕಿ ಪಾವತಿಗೂ ಹಣಕಾಸು ನೀಡಲಾಗುವುದು.
• ಜೂನ್, ಜುಲೈ, ಆಗಸ್ಟ್ ಈ 3 ತಿಂಗಳು ಪಿಎಫ್ ಖಾತೆಗೆ ಕೇಂದ್ರ ಸರ್ಕಾರದಿಂದಲೇ ಹಣ ಹಾಕಲಾಗುವುದು. ಇದು 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರಿಗೆ ಪಾವತಿಯಾಗಲಿದೆ. ಕಂಪನಿ ಮತ್ತು ನೌಕರರ ಪಾಲಿನ ವಂತಿಗೆಯನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡಲಿದೆ. ಇದರಿಂದ 72.5 ಲಕ್ಷ ಕಾರ್ಮಿಕರಿಗೆ ಇಪಿಎಫ್ ನಿಂದ ಅನುಕೂಲವಾಗಲಿದೆ.
• ಸಣ್ಣ ಕೈಗಾರಿಕೆಗಳು ಸಂಬಳ ಅವಶ್ಯವಿದ್ದರೆ ತಕ್ಷಣ ಹಣ ಬಿಡುಗಡೆ.
• ಅಭಿವೃದ್ಧಿ ಸಾಧಿಸುತ್ತಿರುವ ಸಣ್ಣ ಕೈಗಾರಿಕೆಗಳ ನೆರವಿಗೆ 10 ಸಾವಿರ ಕೋಟಿ ರೂ.
• ಉತ್ಪಾದನಾ ವಲಯ ಮತ್ತು ಸೇವಾ ಆಧಾರಿತ ಸಣ್ಣ ಕೈಗಾರಿಕೆಗಳು ಒಂದೇ. ಸಾಲ ಮರುಪಾವತಿಗೆ 4 ವರ್ಷದವರಗೆ ಕಾಲಾವಕಾಶ. ಮೊದಲ 12 ತಿಂಗಳು ಸಾಲ ಮರುಪಾವತಿಸುವಂತಿಲ್ಲ. ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್ ಮೂಲಕ 2,500 ಕೋಟಿ ರೂ. ನೆರವು
• 200 ಕೋಟಿ ರೂವರೆಗೆ ಜಾಗತಿಕ ಟೆಂಡರ್ ಅಗತ್ಯವಿಲ್ಲ. ವಿದೇಶಿ ಕಂಪನಿಗಳು ಈ ಟೆಂಡರ್‍ನಲ್ಲಿ ಭಾಗವಹಿಸುವಂತಿಲ್ಲ. ಇದರಿಂದ ನಮ್ಮ ದೇಶದ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಸಣ್ಣ ಕೈಗಾರಿಕೆಗಳಿಗೆ ಇ-ಮಾರ್ಕೆಟ್ ಮೂಲಕ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಲಾಗುವುದು. ಮುಂದಿನ 45 ದಿನಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಸರ್ಕಾರದ ವತಿಯಿಂದ ಉಳಿಸಿಕೊಂಡಿರುವ ಬಾಕಿ ವಾಪಸ್ ಕೊಡಲಾಗುವುದು.
• 15 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗೂ ಕೇಂದ್ರ ಸರ್ಕಾರದಿಂದ ರಿಲೀಫ್ ಸಿಕ್ಕಿದ್ದು, ನೌಕರರ ಪಿಎಫ್ ಪಾಲು ಶೇ. 12ರಿಂದ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. ಅಂದರೆ ಶೇ. 2ರಷ್ಟು ಮೊತ್ತ ಸಂಬಳದಲ್ಲಿಯೇ ನೌಕರರಿಗೆ ಪಾವತಿಯಾಗಲಿದೆ.
• ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಸಾಲ ಕಂಪನಿಗಳು, ಸಣ್ಣ ಸಾಲ ನೀಡುವ ಕಂಪನಿಗಳಿಗೆ 30 ಸಾವಿರ ಕೋಟಿ ನೀಡಲಾಗುತ್ತದೆ. ಈ ವಲಯಗಳು ನೀಡುವ ಸಾಲಗಳಿಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ.
• ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆ ವಲಯಕ್ಕೆ ಹೊಸ ಆರ್ಥಿಕ ಪ್ಯಾಕೇಜ್ ಅನ್ವಯ 45 ಸಾವಿರ ಕೋಟಿ ರೂ ಹಣ ನೀಡಿಕೆ. ಈ ವಲಯದ ಸಾಲಕ್ಕೂ ಕೇಂದ್ರ ಸರ್ಕಾರವೇ ಗ್ಯಾರಂಟಿ