ಅಂಫಾನ್ ಹೊಡೆತಕ್ಕೆ ನಲುಗಿದ ಒಡಿಶಾ, ಪಶ್ಚಿಮ ಬಂಗಾಳ…

142
firstsuddi

ನವದೆಹಲಿ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಹಾಗೂ ಒಡಿಶಾಸ ಕರಾವಳಿ ಪ್ರದೇಶಗಳು ಸಂಪೂರ್ಣ ನಲುಗಿಹೋಗಿದ್ದು, ಚಂಡ ಮಾರುತದ ಹೊಡೆತಕ್ಕೆ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಭಾರಿ ಮಳೆಯೊಂದಿಗೆ 150 ರಿಂದ 185 ಕಿ.ಮೀ ವೇಗದಲ್ಲಿ ಬೀಸಿರುವ ಗಾಳಿಯಿಂದ ಕರಾವಳಿ ತೀರದ ನಗರಗಳು ಹಾಗೂ ಇತರ ಪಟ್ಟಣಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಈ ಭೀಕರ ಚಂಡಮಾರುತದಿಂದ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಜನರು ಕಂಗಾಲಾಗಿದ್ದು, ಎರಡೂ ರಾಜ್ಯಗಳಲ್ಲಿ ನೂರಾರು ಮನೆಗಳು ಕುಸಿದಿದ್ದು, ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಇದರ ಹೊಡೆತಕ್ಕೆ ಎರಡು ರಾಷ್ಟ್ರಗಳು ಸೇರಿ 12 ವರ್ಷದ ಬಾಲಕಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಹಲವರು ಗಂಭೀರ ಗಾಯಗೊಂಡಿದ್ದಾರೆ.