ಮೂಡಿಗೆರೆ : ಕೊರೊನಾ ರೋಗದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ : ಶೋಭಾ ಕರಂದ್ಲಾಜೆ.

400
firstsuddi

ಕೊಟ್ಟಿಗೆಹಾರ : ತರುವೆಯ ಏಕಲವ್ಯ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ವಾರಂಟೈನ್ ಕೇಂದ್ರದಲ್ಲಿರುವರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‍ನಲ್ಲಿ ಸೂಚಿಸಲಾಗಿದ್ದು ಆತಂಕ ಪಡುವ ಅಗತ್ಯವಿಲ್ಲ. ಗ್ರಾಮೀಣ ಭಾಗದವರಲ್ಲಿ ಬಹುತೇಕರು ಶ್ರಮಿಕ ವರ್ಗದವರಾಗಿರುವುದರಿಂದ ಅವರಲ್ಲಿ ರೋಗ ನಿರೋಧಕ ಹೆಚ್ಚಿರುತ್ತದೆ. ಆದರಿಂದ ರೋಗದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಹಾಕಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಜಿ.ಪಂ ಸದಸ್ಯ ಶಾಮಣ್ಣ, ತಾ.ಪಂ ಅಧ್ಯಕ್ಷ ಕೆ.ಸಿ ರತನ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು, ಬಿಜೆಪಿ ಮುಖಂಡರಾದ ಟಿ.ಎಂ ಗಜೇಂದ್ರ, ಪಂಚಾಕ್ಷರಿ, ಮನೋಜ್, ಸಂಜಯಗೌಡ ಕೊಟ್ಟಿಗೆಹಾರ, ವೇಣುಗೋಪಾಲ್ ಪೈ, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ್, ಸ್ಥಳೀಯ ಅಧಿಕಾರಿಗಳು ಇದ್ದರು.