ಮೂಡಿಗೆರೆ : ಬಣಕಲ್ ಕ್ವಾರಂಟೈನ್ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ…

362
firstsuddi

ಮೂಡಿಗೆರೆ : ಬಣಕಲ್‍ನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಕ್ವಾರಂಟೈನ್ ಕೆಂದ್ರವಾಗಿ ಗುರುತಿಸಿದ್ದು ಬಣಕಲ್ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳ ತಂಡ ಬೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಣಕಲ್‍ನ ಗ್ರಾಮ ಲೆಕ್ಕಾಧಿಕಾರಿ ರಮ್ಯ ಅವರು ಮಾತನಾಡಿ ಬಣಕಲ್‍ನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಲಭ್ಯಗಳನ್ನು ಪರಿಶೀಲಿಸುವಂತೆ ಮೇಲಾಧಿಕಾರಿಗಳು ಸೂಚಿಸಿದ್ದು ಹಾಸಿಗೆ, ಕುಡಿಯುವ ನೀರು, ವಿದ್ಯುತ್ ಮುಂತಾಧ ಮೂಲಭೂತ ಸೌಕರ್ಯಗಳನ್ನು ಪರೀಶಿಲನೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಬೆಟ್ಟಗೆರೆ ಗ್ರಾಮ ಲೆಕ್ಕಾಧಿಕಾರಿ ಉಮೇಶ್, ಫಲ್ಗುಣಿ ಗ್ರಾಮ ಲೆಕ್ಕಾಧಿಕಾರಿ ನಮಿತಾ, ಗ್ರಾಮ ಸಹಾಯಕ ಪೂರ್ಣೇಶ್ ಮುಂತಾದವರು ಇದ್ದರು.