ನವದೆಹಲಿ : ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್‍ನ ಭೀತಿಯ ನಡುವೆ ಈ ಹಿಂದೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸಾಲು ಸಾಲು ಸುದ್ಧಿಗೋಷ್ಠಿ ನಡೆಸಿ ಹಣದ ಹರಿವನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ಘೋಷಣೆ ಮಾಡಿದ್ದರು. ಅದರಂತೆ ಇಂದು ಕೂಡಾ ಸುದ್ದಿಗೋಷ್ಠಿ ನಡೆಸಿ ಮಾರುಕಟ್ಟೆ ಚೈತನ್ಯಕ್ಕೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ.
• ಶೇ.4.4ರಷ್ಠಿದ್ದ ರೆಪೋ ದರವನ್ನು ಶೇ. 4ಕ್ಕೆ ಇಳಿಕೆ ಮಾಡಲಾಗಿದೆ.
• ಗೃಹಸಾಲ, ವಾಹನ ಸಾಲ, ವೈಯಕ್ತಿಕ ಬಡ್ಡಿದರ ಕಡಿತ.
• ಶೇ.3.75ರಷ್ಟಿದ್ದ ರಿಸರ್ವ್ ರೆಪೋ ದರ ಶೇ.3.35ಕ್ಕೆ ಇಳಿಕೆ.
ಲಾಕ್‍ಡೌನ್ ವೇಲೆ ಬೇಡಿಕೆ ಮತ್ತು ಪೂರೈಕೆ ಸಂಪೂರ್ಣ ಕುಸಿದಿದ್ದು, ಪ್ರಮುಖ ಕೈಗಾರಿಕಾ ವಲಯಗಳ ಉತ್ಪಾದನೆ ಶೇ.6.5ಕ್ಕೆ ಕುಸಿತವಾಗಿದೆ. ಮಾರ್ಚ್ ತಿಂಗಳಿನಲ್ಲಿ ಸಿಮೆಂಟ್ ಉತ್ಪಾದನೆ ಶೇ.19ರಷ್ಟು ಕುಸಿತ ಕಂಡಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಶೇ.3.7ರಷ್ಟು ಏರಿಕೆಯಾಗಿದೆ. ಆಹಾರ ಹಣದುಬ್ಬರ ಏಪ್ರಿಲ್‍ನಲ್ಲಿ ಶೇ.8.7 ರಷ್ಟು ಏರಿಕೆ. ಕಳೆದ 30 ವರ್ಷಗಳಲ್ಲೇ ರಫ್ತು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗ್ರಾಹಕ ಬಳಕೆಯ ವಸ್ತುಗಳ ಉತ್ಪಾದನೆ ಶೇ.33 ರಷ್ಟು ಕುಸಿತ ಕಂಡಿದೆ. ಎರಡು ತಿಂಗಳಲ್ಲಿ ದೇಶೀಯ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದೆ. ವಿದೇಶಿ ವಿನಿಮಯ 9.2 ಬಿಲಿಯನ್ ಡಾಲರ್ ಏರಿಕೆಯಾಗಿದೆ.
2021ರಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ನಕಾರಾತ್ಮಕ ಬೆಳವಣಿಗೆ ಆಗಲಿದ್ದು, ಹಣದುಬ್ಬರದ ಅನಿಶ್ಚಿತತೆ ಮುಂದಿನ ದಿನಗಳಲ್ಲಿ ಕಾಡಲಿದೆ. ಎಸ್‍ಐಡಿಬಿಐಗೆ ಮುಂದಿನ 3 ತಿಂಗಳಲ್ಲಿ 15 ಸಾವಿರ ಕೋಟಿ ರೂ. ಆಮದು, ರಫ್ತು ವಲಯಕ್ಕೆ ಆರ್‍ಬಿಐನಿಂದ ರಿಲೀಫ್ ಸಿಕ್ಕಿದೆ. ಜೂನ್ 1 ರಿಂದ ಆಗಸ್ಟ್. 31ರ ವರೆಗೆ ಇಎಂಐ ಪಾವತಿ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಸಿದ್ದಾರೆ.










