ನಿಂತಿದ್ದ ಟ್ರಕ್‍ಗೆ ಬಸ್ ಡಿಕ್ಕಿ-12 ಮಂದಿ ವಲಸೆ ಕಾರ್ಮಿಕರ ದಾರುಣ ಸಾವು…

354
firstsuddi

ನೇಪಾಳ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‍ಗೆ ಬಸ್ ಡಿಕ್ಕಿ ಹೊಡೆದು 12 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ನೇಪಾಳದ ಬಾಂಕೆ ಜಿಲ್ಲೆಯ ಈಸ್ಟ್-ವೆಸ್ಟ್ ಹೈವೇನಲ್ಲಿ ನಡೆದಿದೆ. ಬಸ್‍ನಲ್ಲಿ 30ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರು ಭಾರತದಿಂದ ನೇಪಾಳಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ವೇಗದಲ್ಲಿದ್ದ ಬಸ್ ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬಸ್ ಚಾಲಕ ಸೇರಿದಂತೆ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 22ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನೇಪಾಳದ ಗಂಜ್‍ನಲ್ಲಿ ಇರುವ ಭೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.