ಮಂಗಳೂರು: ಯಶಸ್ ಕರಂ ಲಾಂಛನದಲ್ಲಿ ಪ್ರಜ್ವಲ್ ಕರ್ಪೆ ಅವರು ನಿರ್ದೇಶಿಸಿದ ಮೌನಮಾತಾದಾಗ ಸೈಲೆಂಟ್ ಕಿರು ಚಿತ್ರವು ಯುಟ್ಯೂಬ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಪಾರ ಜನಪ್ರಿಯತೆಯನ್ನು ಪಡೆದಿದೆ.
ಮಾನವೀಯತೆಗೆ ಒತ್ತುಕೊಟ್ಟು,ನೀನು ಏನು ನೆಡುತ್ತೀಯೋ ಅದೇ ಫಲ ನಿನಗೆ ಸಿಗುತ್ತದೆ ಎಂದು ಕರ್ಮ ಸಿದ್ಧಾಂತವನ್ನು ಸಾರುವ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ರಂಗನಟ, ಸಿನಿಮಾ ನಟ ಸುಬ್ರಹ್ಮಣ್ಯ ಪೈ ಬಿ.ಸಿ.ರೋಡು ಹಾಗೂ ಹಿರಿಯ ಸಾಹಿತಿ,ನಟ ಡಾ.ಕಾಸರಗೋಡು ಅಶೋಕ್ ಕುಮಾರ್ ನಟಿಸಿದ್ದಾರೆ.ಉಳಿದ ಪಾತ್ರ ಗಳಲ್ಲಿ ಪ್ರಜ್ವಲ್ ಕರ್ಪೆ,ಚಿರಾಗ್ ಮೊದಲಾದವರು ನಟಿಸಿದ್ದಾರೆ.
ಈ ಚಿತ್ರದಿಂದ ಯುವ ನಿರ್ದೇಶಕ ಪ್ರಜ್ವಲ್ ಕರ್ಪೆ ಯವರಿಗೆ ಕೋಸ್ಟಲ್ ವುಡ್, ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಅವಕಾಶ ಸಿಗುವುದು ಖಚಿತವಾಗಿದೆ ಎಂದು ವೀಕ್ಷಕರು ಹಾಗೂ ಸಿನಿಮಾ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.










