ಜಮ್ಮು ಕಾಶ್ಮೀರಾ : ಭದ್ರತಾ ಪಡೆಗಳಿಂದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಉಗ್ರನ ಬಂಧನ…

197
firstsuddi

ಶ್ರೀನಗರ : ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗ ಇಂದೂ ಕೂಡಾ ಮುಂದುವರೆದಿದ್ದು, ಭದ್ರತಾ ಪಡೆಗಳು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಓರ್ವ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತ ಉಗ್ರನನ್ನು ಜಾಕೀರ್ ಖಾನ್ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಜಮ್ಮು ಕಾಶ್ಮೀರಾದ ಶೋಪಿಯಾನ್ ಜಿಲ್ಲೆಯ ಕೊಜಪುರದಲ್ಲಿ ನಡೆದ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿಯಲ್ಲಿ ಉಗ್ರ ಭದ್ರತಾ ಪಡೆಗಳ ಕೈಗೆ ಸಿಕ್ಕಿಬಿದ್ದಿದ್ದು, ಉಗ್ರನ ಬಳಿಯಿದ್ದ 9ಎಂಎಂ ಪಿಸ್ತೂಲ್ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.