ಸಕಲ ಸರ್ಕಾರಿ, ಸೇನಾ ಗೌರವಗಳೊಂದಿಗೆ ಹುತಾತ್ಮ ಯೋಧರ ಅಂತ್ಯಸಂಸ್ಕಾರ…

150
firstsuddi

ಹೈದರಾಬಾದ್ : ಪೂರ್ವ ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ 20 ಮಂದಿ ಭಾರತೀಯ ಯೋಧರ ಅಂತ್ಯಕ್ರಿಯೆ ನೆರವೇರುತ್ತಿದ್ದು, ಇಂದು ಹೈದರಾಬಾದ್‍ನ ಸೂರ್ಯಪೇಟ್‍ನಲ್ಲಿ ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ, ಸೇನಾ ಗೌರವಗಳೊಂದಿಗೆ ನೇರವೇರಿದೆ. ಕರ್ನಲ್ ಅವರ ಪಾರ್ಥೀವ ಶರೀರವನ್ನು ವಿಶೇಷ ವಾಹನದಲ್ಲಿ ಇರಿಸಿ ಸೂರ್ಯಪೇಟ್‍ನಿಂದ 6 ಕಿ,ಮೀ ದೂರದಲ್ಲಿರುವ ತಮ್ಮ ಜಮೀನಿನವರೆಗೆ ದಾರಿಯುದ್ಧಕ್ಕೂ ಅವರ ತ್ಯಾಗ ಹಾಗೂ ಬಲಿದಾನದ ಬಗ್ಗೆ ಹೆಮ್ಮೆಯಿಂದ ಜಯಘೊಷ ಕೂಗಿ ಮೆರವಣಿಗೆ ಮೂಲಕ ಕರೆತಂದರು. ಈ ವೇಳೆ ತೆಲಂಗಾಣದ ಸಚಿವರು ಹಾಗೂ ಸೇನಾಧಿಕಾರಿಗಳು ಭಾಗಿಯಾಗಿದ್ದರು.
ಹಾಗೆಯೇ ತಮಿಳುನಾಡಿನ ಮಧುರೈನ ಯೋಧರಾದ ಕೆ.ಪಳನಿ ಅವರ ಅಂತ್ಯಸಂಸ್ಕಾರವನ್ನು ಕಡಕಲೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.