ಕೊಟ್ಟಿಗೆಹಾರ:ಯೋಗ ಭಾರತೀಯ ಸಂಸ್ಕøತಿಯ ಭಾಗವಾಗಿದ್ದು ಯೋಗವನ್ನು ಭಾರತೀಯುರು ನಿತ್ಯ ಬದುಕಿನ ಭಾಗವಾಗಿಸಬೇಕಿದೆ ಎಂದು ಬಣಕಲ್ ಜೇಸಿಐ ಅಧ್ಯಕ್ಷ ರವಿ ವಾಟೆಖಾನ್ ಹೇಳಿದರು.
ಬಣಕಲ್ ಜೇಸಿಐ ವಿಸ್ಮಯದ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಯೋಗವೂ ದೇಹದ ಸಮಗ್ರ ಆರೋಗ್ಯ ಅಭಿವೃದ್ದಿಗೆ ಪೂರಕವಾಗಿದೆ. ಮಕ್ಕಳಿಮದ ಹಿಡಿದು ವಯೋವೃದ್ದರವರೆಗೆ ಸುಲಭವಾಗಿ ಮಾಡಬಹುದಾದ ಯೋಗ ವಿಧಾನಗಳಿದ್ದು ಯೋಗ ತಜ್ಞರ ಮಾರ್ಗದರ್ಶನದಲ್ಲಿ ಯೋಗವನ್ನು ಮಾಡಬುದಾಗಿದೆ. ಮಕ್ಕಳಿಗೆ ಯೋಗದ ಬಗ್ಗೆ ಬಾಲ್ಯದಲ್ಲಿ ಆಸಕ್ತಿ ಮೂಡಿಸಿದರ ಯೋಗ ಎಲ್ಲರ ಬದುಕಿನ ಮುಖ್ಯ ಭಾಗವಾಗಲಿದೆ ಎಂದರು.
ಪೂರ್ವಾಧ್ಯಕ್ಷರಾದ ಸುರೇಶ್ ಶೆಟ್ಟಿ, ಗಜೇಂದ್ರ, ನಿಕಟಪೂರ್ವ ಅಧ್ಯಕ್ಷ ದಿನೇಶ್, ಜೇಸಿರೇಟ್ ವಿಭಾಗದ ನಿಕಟಪೂರ್ವ ಅಧ್ಯಕ್ಷ ರಜಿತಾ ರತ್ನಾಕರ್ ಹಾಗೂ ಪಧಾಧಿಕಾರಿಗಳು ಇದ್ದರು.










