ಮೂಡಿಗೆರೆ : ಯಾಂತ್ರಿಕೃತ ಭತ್ತನಾಟಿ ಮಾಡುವುದರಿಂದ ಖರ್ಚು ಕಡಿಮೆಯಾಗುವುದರ ಜೊತೆಗೆ ಕಾರ್ಮಿಕರ ಕೊರತೆಯ ಸಮಸ್ಯೆಯು ಬಗೆ ಹರಿಯುತ್ತದೆ : ಭರತ್‍ಕುಮಾರ್.

213
firstsuddi

ಕೊಟ್ಟಿಗೆಹಾರ: ಯಾಂತ್ರಿಕೃತ ಭತ್ತನಾಟಿ ಮಾಡುವುದರಿಂದ ಖರ್ಚು ಕಡಿಮೆಯಾಗುವುದರ ಜೊತೆಗೆ ಕಾರ್ಮಿಕರ ಕೊರತೆಯ ಸಮಸ್ಯೆಯು ಬಗೆ ಹರಿಯುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಭರತ್‍ಕುಮಾರ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ತರುವೆಯಲ್ಲಿ ನಡೆದ ಯಂತ್ರಶ್ರೀ ಯೋಜನೆಯ ಭತ್ತದ ಕೃಷಿಯಲ್ಲಿ ಯಾಂತ್ರಿಕರಣ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಾಂತ್ರಿಕೃತ ಭತ್ತ ನಾಟಿಯಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಇಳುವರಿ ಪಡೆದು ಅಧಿಕ ಲಾಭ ಗಳಿಸಬಹುದಾಗಿದೆ. ರೈತರು ಒಂದು ಎಕರೆಗೆ 8 ಸಾವಿರದಿಂದ 10 ಸಾವಿರದವರೆಗೆ ಖರ್ಚು ಕಡಿಮೆ ಮಾಡಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಗಿರೀಶ್ ಮಾತನಾಡಿ, ಕೆಪಿಆರ್ 1 ಹಾಗೂ ತುಂಗಾ ಮುಂತಾದ ಅಲ್ಪಾವಧಿಯ ತಳಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಬೆಂಕಿರೋಗ, ಮಣ್ಣಿನಿಂದ ಬರುವ ಖಾಯಿಲೆ, ಊದುಬತ್ತಿ ರೋಗ, ಶಿಲೀಂದ್ರದಿಂದ ಬರುವ ಖಾಯಿಲೆಗಳನ್ನು ತಡೆಯಬಹುದು. ಜೊತೆಗೆ ಉತ್ತಮ ಇಳುವರಿ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವಿಚಾರಕ ಹರೀಶ್ ಬಿ, ಸೇವಾ ಪ್ರತಿನಿಧಿ ದಿವಾಕರ್ ಕಾರಂತ್, ಕಾವ್ಯ, ವ್ಯವಸ್ಥಾಪಕ ನಿವೇಶ್ ಜೈನ್, ಹಾಗೂ ಸುತ್ತಮುತ್ತಲ್ಲಾ ಗ್ರಾಮಗಳ ರೈತರು ಇದ್ದರು.