ಚಿಕ್ಕಮಗಳೂರು : ಸಿನಿಮೀಯಾ ರೀತಿಯಲ್ಲಿ ಚಿನ್ನದಂಗಡಿಗೆ ನುಗ್ಗಿ ಗುಂಡು ಹಾರಿಸಿ ಕಳ್ಳತನಕ್ಕೆ ಯತ್ನ…

218
firstsuddi

ಚಿಕ್ಕಮಗಳೂರು : ಸಿನಿಮೀಯಾ ರೀತಿಯಲ್ಲಿ ಚಿನ್ನದಂಗಡಿಗೆ ನುಗ್ಗಿ ದರೋಡೆಕೋರರು ಬಂದೂಕಿನಿಂದ ಗುಂಡು ಹಾರಿಸಿ ಚಿನ್ನಾಭರಣ ದರೋಡೆ ಮಾಡಲು ಯತ್ನಿಸಿರುವ ಘಟನೆ ನಗರದ ಎಂ.ಜಿ. ರಸ್ತೆಯಲ್ಲಿರುವ ಕೇಸರಿ ಜ್ಯುವೆಲ್ಲರಿ ಶಾಪ್‍ನಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಬೈಕ್‍ನಲ್ಲಿ ಬಂದ ಮೂವರು ಖದೀಮರು ಚಿನ್ನದ ಅಂಗಡಿ ಒಳಗೆ ನುಗ್ಗಿ ಅಂಗಡಿಯಲ್ಲಿ ಇದ್ದ ವಸ್ತುಗಳನ್ನು ಪುಡಿ ಮಾಡಿ ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಶಾಪ್ ಮಾಲೀಕ ಕೂಗಿಕೊಂಡಾಗ ಮೂರು ಸುತ್ತು ಗಾಳಿಯಲ್ಲಿ ಗುಂಡನ್ನು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದು, ಅದೃಷ್ಟಾವಶಾತ್ ಅಂಗಡಿ ಮಾಲೀಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಎಸ್ಪಿ ಅಕ್ಷಯ್ ಮಚ್ಚಿಂದ್ರ ಹಾಗೂ ನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.