ಮೂಡಿಗೆರೆ : ಕಳಸ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೊನಾ ದೃಢ-ಪೊಲೀಸ್ ಠಾಣೆ ಸೀಲ್‍ಡೌನ್…

338
firstsuddi

ಕಳಸ : ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗಳಿಗೆ ಕೊರೋನ ಪಾಸಿಟೀವ್ ದೃಡವಾಗಿದೆ. ಸಿಬ್ಬಂದಿಗಳಿಗೆ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಳಸ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಪೊಲೀಸ್ ಠಾಣೆಯಿಂದ ನೂರು ಮೀ ದೂರ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಪೊಲೀಸ್ ಠಾಣೆ ಹಾಗೂ ಕೆ.ಎಂ.ರಸ್ತೆ,ಮುಖ್ಯ ರಸ್ತೆ ಸ್ಯಾನಿಟೈಜರ್ ಮಾಡಲಾಯಿತು. ಸೋಂಕಿತರನ್ನು ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೋನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ತೆಗೆದು ತಪಾಸಣೆಗೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ವೈದ್ಯ ಡಾ|ಪ್ರೇಮ್ ಕುಮಾರ್,ಕಂದಾಯ ನಿರೀಕ್ಷಕ ಅಜ್ಜೇಗೌಡ,ಪಿಡಿಒ ಕವೀಶ್,ಲೆಕ್ಕ ಪರಿಶೋದಕ ಸಂತೋಷ್,ವಿಎ ಪ್ರಸನ್ನ ಇದ್ದರು.
ಕಳಸದಲ್ಲಿ ಹೆಚ್ಚಿದ ಆತಂಕ
ಕಳಸ ಮುಖ್ಯ ರಸ್ತೆಯಲ್ಲಿಯೇ ಇರುವ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಕೊರೋನ ಪಾಸಿಟೀವ್ ದೃಡವಾಗುತ್ತಿದ್ದಂತೆ ಪಟ್ಟಣದ ಜನತೆ ಆತಂಕಕ್ಕಿಡಾಗಿದ್ದಾರೆ.
ಈ ಹಿಂದೆ ಪಟ್ಟಣದ ನಾಲ್ವರಿಗೆ ಸೋಂಕು ತಗುಲಿ ಅವರು ಗುಣ ಮುಖರಾಗಿ ಹಿಂದಿರುಗುತ್ತಿದ್ದಂತೆ ಮತ್ತೆ ನಾಲ್ವರಿಗೆ ಸೋಂಕು ತಗುಲಿದ್ದು ಸಾರ್ವಜನಿಕರಿಗೆ ಮತ್ತಷ್ಟು ಭಯ ಆವರಿಸಿದೆ.
ಪೊಲೀಸರಿಗೆ ಕಳಸಕ್ಕೆ ಪ್ರವಾಸಿಗರು ಬಂದಾಗ ಅವರನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕೊರೋನ ಅಂಟಿಕೊಂಡಿತ್ತೋ ಅಥವಾ ಹೊರ ರಾಜ್ಯಕ್ಕೆ ಕರ್ತವ್ಯಕ್ಕೆ ಹೋಗಿದ್ದಾಗ ಸೋಂಕು ತಗುಲಿತ್ತೋ ಎನ್ನುವ ಅನುಮಾನಗಳು ವ್ಯಕ್ತವಾಗಿದೆ.