ಮೂಡಿಗೆರೆ : ಬಣಕಲ್ ಠಾಣೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ…

274
firstsuddi

ಕೊಟ್ಟಿಗೆಹಾರ: ಬಣಕಲ್ ಪೊಲೀಸ್ ಠಾಣೆಯ ಅಕ್ರಮ ಚಟುವಟಿಕೆ ಹಾಗೂ ಭ್ರಷ್ಟಾಚಾರದ ಕೇಂದ್ರವಾಗುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಬಣಕಲ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪಗೌಡ ಮಾತನಾಡಿ ದರೋಡೆಕೋರರು,ಕಳ್ಳರು, ಕೊಲೆಗಡುಕರ ಮೇಲೆ ಕ್ರಮ ಕೈಗೊಳ್ಳುವಂತೆ ಸಾಮಾನ್ಯ ಜನರು, ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಲಾಗಿದೆ. ಬಣಕಲ್ ಠಾಣೆಯ ಕೆಲ ಪೊಲೀಸರ ಭ್ರಷ್ಟಾಚಾರಕ್ಕೆ ಕೊನೆ ಇಲ್ಲದಂತಾಗಿದೆ. ಎಸ್‍ಪಿ ಅವರಿಗೆ ದೂರು ನೀಡಿದರೂ ಕೂಡ ಈವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ. ತಪಿತಸ್ಥ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಹಾಗೂ ರೈತರು ಹಾಗೂ ಬಡವರಿಂದ ಅಕ್ರಮವಾಗಿ ಪಡೆದ ಲಂಚವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ರೈತಮುಖಂಡ ಸುರೇಶ್ ಬಿ.ಎ ಮಾತನಾಡಿ ಸಾರ್ವಜನಿಕರ ರಕ್ಷಣೆ ಹೊಣೆ ಹೊತ್ತಿರುವ ಪೊಲೀಸರು ಕಾನೂನು ದುರುಪಯೋಗ ಮಾಡಿಕೊಂಡು ಹಣ ಮಾಡುವ ದಂಧೆಗೆ ಇಳಿದಿರುವುದು ಅಕ್ಷಮ್ಯ ಅಪರಾಧ. ಸಮಗ್ರವಾಗಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ದಯಾಕರ್ ಬಿ.ಸಿ, ತಾಲ್ಲೂಕು ಅಧ್ಯಕ್ಷ ನಾಗೇಶ್ ಪಿ.ಕೆ, ರೈತರಾದ ವೃಷಭ್‍ರಾಜ್, ಹರ್ಷವರ್ಧನ್, ಸುಬ್ರಮಣ್ಯ, ರಾಮಚಂದ್ರ, ಸುರೇಂದ್ರ, ಪ್ರದೀಪ್, ಶಿವಕುಮಾರ್ ಮುಂತಾದವರು ಇದ್ದರು.