ಕೊರೊನಾ ಸೋಂಕಿನಿಂದ ತೃಣಮೂಲ ಕಾಂಗ್ರೆಸ್ ಶಾಸಕ ಸಮರೇಶ್ ದಾಸ್ ನಿಧನ…

119
firstsuddi

ಕೋಲ್ಕತ್ತಾ : ಮಹಾಮಾರಿ ಕೊರೊನಾ ಸೋಂಕಿಗೆ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ಸಮರೇಶ್ ದಾಸ್ ಅವರು ಬಲಿಯಾಗಿದ್ದಾರೆ. 76 ವರ್ಷದ ಸಮರೇಶ್ ದಾಸ್ ಅವರಿಗೆ ಕೊನೋನಾ ಸೋಂಕು ದೃಢವಾದ ಬಳಿಕ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮೊದಲೇ ಹೃದಯ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.