ದೆಹಲಿ : ಕರ್ನಾಟಕ ರಾಜ್ಯದ ವಿವಿಧ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಕುರಿತು ರಾಜ್ಯ ಮಿನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.
ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ, ಕಾರವಾರದ ಮಾವಾಳಿ ಹಾಗೂ ಮಂಗಳೂರಿನ ಬೈಕಂಪಾಡಿಯಲ್ಲಿ ಸಂಯೋಜಿತ ಸೀ ಫುಡ್ ಪಾರ್ಕ್ ಯೋಜನೆಗಳು. ರಾಜ್ಯ ಕರಾವಳಿಯ 8 ಮೀನುಗಾರಿಕಾ ಹಾರ್ಬರ್ಗಳ ಆಧುನೀಕರಣ ಹಾಗೂ 16 ಕಡೆಗಳಲ್ಲಿ ಮೀನುಗಾರಿಕಾ ಇಳಿದಾಣಗಳ ಉನ್ನತೀಕರಣ ಸೇರಿದಂತೆ, ವಿವಿಧ ಯೋಜನೆಗಳಿಗೆ ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ಮಾಡಿ ಅನುಮೋದನೆ ನೀಡಿ, ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಯೋಜನಾ ವರದಿಗಳನ್ನು ಪರಿಶೀಲಿಸಿದ ಸಚಿವರು, ಧನಾತ್ಮಕವಾಗಿ ಸ್ಪಂಧಿಸಿದರು. ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಹಾಗೂ ಪ್ರಧಾನ ಮಂತ್ರಿಯವರ ಆತ್ಮ ನಿರ್ಭರ ಭಾರತ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಆರ್ಕೆವಿವೈ ಮುಖಾಂತರ ಯೋಜನೆಗಳಿಗೆ ಅನುಮೋದನೆ ನೀಡಿ, ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಿನುಗಾರಿಕಾ ಇಲಾಖೆಯ ನಿರ್ದೇಶಕರಾದ ಶ್ರೀ ರಾಮಾಚಾರಿಯವರು ಉಪಸ್ಥಿತರಿದ್ದರು.










