ಕೊಟ್ಟಿಗೆಹಾರ: ಅಪಘಾತಕ್ಕೀಡಾದ ಕಾರಿನಲ್ಲಿದ್ದ ಕುಟುಂಬವನ್ನು ರಕ್ಷಿಸಿದ ಹಾವಳಿ ಬಾಯ್ಸ್ ತಂಡ… 

439
ಕೊಟ್ಟಿಗೆಹಾರ: ಮಾಗುಂಡಿಯಿಂದ ಮೂಡಿಗೆರೆಗೆ ತೆರಳುತ್ತಿದ್ದ ಕಾರು ಚಾಲಕನ  ನಿಯಂತ್ರಣ ತಪ್ಪಿ ಮಾಗುಂಡಿಯ ಸುಬ್ಬೆಗೌಡ ಎಂಬುವವರ ಮನೆಯ ಸಮೀಪ ರಸ್ತೆ ಬದಿಯಲ್ಲಿ ಅಪಘಾತಕ್ಕಿಡಾಗಿದ್ದು ಸ್ಥಳದಲ್ಲೆ ಇದ್ದ ಹಾವಳಿ ತಂಡದ ಸದಸ್ಯರು ಕೂಡಲೇ ಕಾರ್ಯ ಪ್ರವೃತ್ತರಾಗಿ ಗುಂಡಿಗೆ ಬಿದ್ದಿದ್ದ ಕಾರನ್ನು ಮೇಲಕೆತ್ತಿ ಕಾರಿನಲ್ಲಿದ್ದ ಕುಟುಂಬದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಹೇರೂರು ಮತ್ತು ಕೊಟಿಗೆಹಾರ ಅಶ್ವತ್ ಅವರು ತಮ್ಮ ಕಾರಿನಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದ ಕಾರಿನಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ಕರೆದ್ಯೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು.
ಈ  ಸಂದರ್ಭದಲ್ಲಿ ಹಾವಳಿ ತಂಡದ ಸದಸ್ಯರಾದ ಸಮರ್ಥ್,ಮಾಳಿಗನಾಡು, ಸಂತೋಷ್ ಹಾದಿಓಣಿ, ಮದನ್, ಜೈದೀಪ್, ಮೋಹನ್, ಸಂದೇಶ್, ಸುಬ್ಬೆಗೌಡ, ಅಪ್ಪಣ್ಣಿ, ನವೀನ್ ಹಾವಳಿ, ಸಂತೋಷ್ ಅತ್ತಿಗೆರೆ ಇದ್ದರು