ಸ್ಯಾಂಡಲ್‍ವುಡ್‍ನ ಹಿರಿಯ ನಟ ಸಿದ್ಧರಾಜ್ ಕಲ್ಯಾಣ್ಕರ್ ಹೃದಯಾಘಾತದಿಂದ ವಿಧಿವಶ…

160
firstsuddi

ಬೆಂಗಳೂರು : ಸ್ಯಾಂಡಲ್‍ವುಡ್‍ನ ಹಿರಿಯ ನಟ ಸಿದ್ಧರಾಜ್ ಕಲ್ಯಾಣ್ಕರ್ (60) ಅವರು ನಿನ್ನೆ ತಡರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹುಬ್ಬಳ್ಳಿ ಮೂಲದ ಸಿದ್ಧರಾಜ್ ಕಲ್ಯಾಣ್ಕರ್ ಅವರು ನಿನ್ನೆಯಷ್ಟೇ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬವಿದ್ದರೂ ಧಾರವಾಹಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಿದ್ಧರಾಜ್ ಕಲ್ಯಾಣ್ಕರ್ ಅವರು ಕಲಾವಿದರೊಂದಿಗೆ ಸೆಟ್‍ನಲ್ಲೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬಳಿಕ ರಾತ್ರಿ 11:30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭೂಮಿಗೀತ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ಸುಮಾರು 70 ಸಿನಿಮಾಗಳಲ್ಲಿ ನಟಿಸಿದ್ದರು. ಹಿರಿಯ ನಟನ ನಿಧನಕ್ಕೆ ಸ್ಯಾಂಡಲ್‍ವುಡ್ ಹಾಗೂ ಕಿರುತೆರೆ ನಟರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಹುಬ್ಬಳ್ಳಿಯಲ್ಲಿ ನೆರವೇರಲಿದೆ.