ಕೊಟ್ಟಿಗೆಹಾರ:ಕಳೆದ ವರ್ಷ ನೆರೆಯಿಂದಾಗಿ ಹಾನಿಗೊಳಗಾದ ನೆರೆಪೀಡಿತ ಪ್ರದೇಶಗಳಾದ ದುರ್ಗದಹಳ್ಳಿ, ಮೈದಾಡಿ, ಮಧುಗುಂಡಿ, ಹಲಗಡಕ, ಗೌಡನಕೂಡಿಗೆ, ಬಲಿಗೆ, ತೋಟದಮನೆ ಸುತ್ತಮುತ್ತ ಜೀಪ್ ರ್ಯಾಲಿ ನಡೆಯಿತು.
ಮಂಗಳೂರು, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಸಕಲೇಶಪುರ, ಮಡಿಕೇರಿ ಮೊದಲಾದ ಕಡೆಗಳಿಂದ 40 ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು. ಕೆಸರುಮಯ ರಸ್ತೆಯಲ್ಲಿ ಜೀಪು ರ್ಯಾಲಿ ನಡೆಯುತ್ತಿದ್ದ ದೃಶ್ಯವನ್ನು ಸ್ಥಳೀಯರು ಕಣ್ತುಂಬಿಕೊಂಡರು. ರ್ಯಾಲಿಯಲ್ಲಿ ಭಾಗವಹಿಸಿದ ಕೆಲ ಜೀಪುಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದು ಟ್ಯಾಕ್ಟರ್ನ ಮೂಲಕ ಜೀಪನ್ನು ಹೊರ ತೆಗೆಯಲಾಯಿತು. ಕೆಲವೆಡೆ ಖಾಸಗಿ ತೋಟದ ನಡುವೆ ರ್ಯಾಲಿ ಸಾಗಿದರೆ ಮತ್ತೆ ಕೆಲವೆಡೆ ಸರ್ಕಾರಿ ರಸ್ತೆಯಲ್ಲಿ ರ್ಯಾಲಿ ನಡೆಯಿತು. ಕಡಿದಾದ ದುರ್ಗಮ ಹಾದಿಗಳಲ್ಲಿಯೂ ಕೂಡ ವೇಗದಲ್ಲಿ ಜೀಪ್ ಸವಾರರು ಜೀಪ್ ಚಲಾಯಿಸುತ್ತಿದ್ದ ದೃಶ್ಯ ಮೈನವಿರೇಳಿಸುವಂತಿತು. ಜೀಪ್ಗಳ ಶಬ್ದದ ಮೊರೆತ ಕಿವಿಗಡಗಿಚ್ಚುವಂತಿತ್ತು.
ಕಳೆದ ವರ್ಷವಷ್ಟೆ ನೆರೆಯಿಂದ ಹಲವೆಡೆ ಗುಡ್ಡ ಕುಸಿದು ಹಾನಿಯಾಗಿದ್ದ ಪ್ರದೇಶದಲ್ಲಿ ಜೀಪ್ ರ್ಯಾಲಿ ನಡೆಸಿರುವುದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.
ರ್ಯಾಲಿಗೆ ತಡೆಯೊಡಿದ್ದ ಬಾಳೂರು ಪೋಲಿಸರು
ಶನಿವಾರ ಬೆಳಿಗ್ಗೆ ಮೈದಾಡಿಯಿಂದ ಜೀಪು ರ್ಯಾಲಿ ಪ್ರಾರಂಭವಾಗಿದ್ದು ಬಾಳೂರು ಪೋಲಿಸರು ದುರ್ಗದಹಳ್ಳಿ ಸಮೀಪ ಅಡ್ಡಗಟ್ಟಿದ ಪೋಲಿಸರು ಅನುಮತಿ ಇಲ್ಲದೆ ಇರುವುದರಿಂದ ರ್ಯಾಲಿ ನಡೆಸುವಂತಿಲ್ಲ ಎಂದು ಆಯೋಜಕರಿಗೆ ತರಾಟೆಗೆ ತೆಹೆದುಕೊಂಡರು.
ನಂತರ ಆಯೋಜಕರು ಪೋನ್ ಮೂಲಕ ಮೌಖಿಕ ಅನುಮತಿ ಪಡೆದಿದ್ದು ನಂತರಜೀಪ್ ರ್ಯಾಲಿಗೆ ಅವಕಾಶ ಕಲ್ಪಿಸಲಾಯಿತು.










