ಕಳಸ : ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ವತಿಯಿಂದ ಜಯ ಸಿ ಸುವರ್ಣ ಇವರಿಗೆ ಶ್ರದ್ದಾಂಜಲಿ…

149
firstsuddi

ಕಳಸ : ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ವತಿಯಿಂದ ಬಿಲ್ಲವ ಕುಲತಿಲಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ ಸುವರ್ಣ ಇವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಸಮಾಜ ಚಿಂತನೆಯ ಮೂಲಕ ಜಾತಿ, ಧರ್ಮ ಮತ್ತು ಮತಗಳ ಅಂತರವಿಲ್ಲದೆ ಮಾನವೀಯತೆಯಿಂದ ಶ್ರೇಷ್ಠ ವ್ಯಕ್ತಿತ್ವದ ಮನುಷ್ಯನಾಗಿ ಬೆಳೆದಿದ್ದರು. ಅವರ ತತ್ವ ಮತ್ತು ಸಿದ್ದಾಂತಗಳನ್ನು ಆದರ್ಶವಾಗಿಟ್ಟುಕೊಂಡು ನಾವು ಮುನ್ನಡೆಯುವ ಮೂಲಕ ಗೌರವ ಸಲ್ಲಿಸಬೇಕಾಗಿದೆ. ಸರ್ವ ಸಮಾಜದ ವಿಶ್ವಾಸ ಗಳಿಸಿದ ಶ್ರೇಷ್ಟ ಮಾನ್ಯ ಮತ್ತು ಸಂಧಾನಕರರಾಗಿದ್ದರು.ಭಾರತ್ ಬ್ಯಾಂಕನ್ನು ದೂರದೃಷ್ಟಿ ಶಿಸ್ತು ಶ್ರದ್ಧೆಯಿಂದ ನಡೆಸಿ ಲಕ್ಷಾಂತರ ಜನರ ಬಾಳಿಗೆ ಶ್ರೀರಕ್ಷೆ ಆಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಚಂದ್ರಶೇಖರ, ರಾಮಚಂದ್ರ, ಈಶ್ವರ, ಪ್ರಶಾಂತ, ಶ್ರೀನಿವಾಸ ಇತರರು ಇದ್ದರು.