ಮೂಡಿಗೆರೆ : ವಿನಾಯಕ ಸ್ಟೋರ್ ಅಂಗಡಿ ಮಾಲೀಕರಿಗೆ ಕೂಡಿಟ್ಟ ಹುಂಡಿ ಹಣ ನೀಡಿ ಮಾನವೀಯತೆ ಮೆರೆದ ಬಾಲಕ…

757
firstsuddi

ಕೊಟ್ಟಿಗೆಹಾರ : ಅಗ್ನಿದುರಂತದಲ್ಲಿ ಅಂಗಡಿ ಸುಟ್ಟು ಹೋಗಿದ್ದ ಮೂಡಿಗೆರೆಯ ಕರುಣಾಕರ್ ಅವರಿಗೆ ಅತ್ತಿಗೆರೆಯ ಆಶಾ ಹಾಗೂ ಸಂತೋಷ್ ಅವರ ಪುತ್ರ ಅಗಸ್ತ್ಯ ತಾನು ಕೂಡಿ ಇಟ್ಟಿದ್ದ ಹುಂಡಿಯ ಹಣವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.
ಎರಡು ದಿನದ ಹಿಂದೆ ಮೂಡಿಗೆರೆ ಪಟ್ಟಣದ ವಿನಾಯಕ ಬುಕ್ ಸ್ಟೋರ್ ಅಂಗಡಿ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿತ್ತು. ಅಂಗಡಿಗೆ ವಿಮೆಯನ್ನು ಮಾಡಿಸಿರಲಿಲ್ಲ. ಕಳೆದ 10 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಈ ಪುಸ್ತಕದ ಅಂಗಡಿ ಶಿಕ್ಷಕರ ವಿದ್ಯಾರ್ಥಿಗ ಮತ್ತು ಪೋಷಕರ ನೆಚ್ಚಿನ ಅಂಗಡಿಯಾಗಿತ್ತು. ಎಲ್‍ಕೆಜಿಯಿಂದ ಹಿಡಿದು ಮಾಸ್ಟರ್ ಡಿಗ್ರಿವರೆಗಿನ ಎಲ್ಲಾ ರೀತಿಯ ಪುಸ್ತಕಗಳು ಈ ಅಂಗಡಿಯಲ್ಲಿ ಸಿಗುತ್ತಿತ್ತು. ಸಾಹಿತ್ಯ, ಕೃಷಿ, ಕಲೆ, ಉದ್ಯೋಗ ಮಾಹಿತಿ, ಕ್ರೀಡಾ ಪರಿಕರಗಳು ಕೂಡ ಈ ಅಂಗಡಿಯಲ್ಲಿ ಸಿಗುತ್ತಿತ್ತು. ಆದರೆ ಬೆಂಕಿ ಅನಾಹುತದಿಂದ ಎಲ್ಲಾವನ್ನು ಕಳೆದುಕೊಂಡಿದ್ದರು.
ಹಲವರು ಕರುಣಾಕರ ಅವರಿಗೆ ನೆರವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, ಪತ್ರಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಗೆರೆಯ ಕರುಣಾಕರ್ ಅವರ ಅಂಗಡಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭಿಸಿರುವುದನ್ನು ಕೇಳಿದ ಅತ್ತಿಗೆರೆಯ ಆಶಾ ಮತ್ತು ಸಂತೋಷ್ ದಂಪತಿಗಳ ಪುತ್ರ ಅಗಸ್ತ್ಯ ಸ್ವಇಚ್ಚೆಯಿಂದ ತಾನು ಹುಂಡಿಯಲ್ಲಿ ಕೂಡಿ ಇಟ್ಟಿದ್ದ ಹಣವನ್ನು ಮತ್ತು ದೈರ್ಯಗೆಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಪುಟ್ಟ ಪತ್ರವನ್ನು ಪುಸ್ತಕದಂಗಡಿ ಮಾಲೀಕ ಕರುಣಾಕರ ಅವರಿಗೆ ತಲುಪಿಸಿದ್ದಾನೆ.