ದೀಪಗಳನ್ನು ಬೆಳಗಿಸುವ ಮೂಲಕ ನಮ್ಮ ಭಾರತೀಯ ಸೈನಿಕರಿಗೆ ಕೃತಜ್ಞತೆ ಸಲ್ಲಿಸೋಣ : ಮೋದಿ.

131
firstsuddi

ನವದೆಹಲಿ : ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವಾಸಿಗಳಿ ದೀಪಾವಳಿ ಹಬ್ಬದ ಶುಭಾಷಯ ಕೋರಿದ್ದಾರೆ. ಅಲ್ಲದೇ ಈ ಬೆಳಕಿನ ಹಬ್ಬವನ್ನು ನಮ್ಮ ಭಾರತೀಯ ಸೈನಿಕರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದೀಪಗಳನ್ನು ಬೆಳಗಿಸೋಣ ಎಂದು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ದೀಪಾವಳಿ ಶುಭಾಶಯಗಳು! ಈ ಹಬ್ಬವು ಮತ್ತಷ್ಟು ಹೊಳಪು ಮತ್ತು ಸಂತೋಷವನ್ನು ನೀಡಲಿ. ಎಲ್ಲರೂ ಸಮೃದ್ಧ ಮತ್ತು ಆರೋಗ್ಯವಾಗಿರಿ ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಈ ಬಾರಿಯ ದೀಪಾವಳಿ ಹಬ್ಬದಂದು ನಮ್ಮ ದೇಶವನ್ನು ಕಾಯುವ ವೀರ ಸೈನಿಕರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ. ಗಡಿಯಲ್ಲಿ ನಿರ್ಭಯದಿಂದ ದೇಶವನ್ನು ಕಾಯುತ್ತಿರುವ ಯೋಧರ ಬಗ್ಗೆ ಪದಗಳಲ್ಲಿ ವರ್ಣಿಸಲು ಅಸಾಧ್ಯ. ನಮ್ಮ ಸೈನಿಕರ ಅನುಕರಣೀಯ ಧೈರ್ಯಕ್ಕಾಗಿ ನಾವು ಹೊಂದಿರುವ ಕೃತಜ್ಞತೆಯ ಅರ್ಥಕ್ಕೆ ಪದಗಳು ನ್ಯಾಯ ಒದಗಿಸುವುದಿಲ್ಲ. ಗಡಿಯಲ್ಲಿರುವವರ ಕುಟುಂಬಗಳಿಗೂ ನಾವು ಆಭಾರಿಯಾಗಿದ್ದೇವೆ. ಈ ವೀರ ಯೋಧರನ್ನು ನೆನಪಿಸಿಕೊಂಡ ಬಳಿಕ ನಾವು ದೀಪಾವಳಿ ಹಬ್ಬವನ್ನು ಆಚರಿಸಬೇಕು ಎಂದು ಬರೆದುಕೊಂಡಿದ್ದಾರೆ.