ಜಮ್ಮು ಕಾಶ್ಮೀರಾದಲ್ಲಿ ಭಾರಿ ಹಿಮಾಪಾತಕ್ಕೆ ಸಿಲುಕಿ ಓರ್ವ ಯೋಧ ಹುತಾತ್ಮ…

152
firstsuddi

ಶ್ರೀನಗರ : ಉತ್ತರ ಕಾಶ್ಮೀರಾದ ಕುಪ್ವಾರಾ ಜಿಲ್ಲೆಯಲ್ಲಿ ಭಾರಿ ಹಿಮಾಪಾತ ಸಂಭವಿಸಿ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹುತಾತ್ಮ ಯೋಧನನ್ನು ನಿಖಿಲ್ ಶರ್ಮಾ ಎಂದು ಗುರುತಿಸಲಾಗಿದೆ. ಕುಪ್ವಾರಾ ಜಿಲ್ಲೆಯ ತಂಗ್‍ಧಾರ್ ಸೆಕ್ಟರ್ ನಿಯಂತ್ರಣ ಪ್ರದೇಶದಲ್ಲಿ ಇರುವ ಸೇನಾ ಪೋಸ್ಟ್ ಮೇಲೆ ಇಂದು ಬೆಳಿಗ್ಗೆ ಹಿಮಾಪಾತ ಸಂಭವಿಸಿದ್ದು, ಮೂವರು ಯೋಧರು ಸಿಲುಕಿಕೊಂಡಿದ್ದರು. ಬಳಿಕ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಓರ್ವ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದು, ಇನ್ನಿಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.