ಬೆಂಗಳೂರು : ಸ್ಯಾಂಡಲ್‍ವುಡ್ ನ ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕ ಪಂಡಿತ್ ಅವರ ಪುತ್ರಿ ಐರಾ ಬೇಬಿ ಇಂದು 2ನೇ ವರ್ಷದ ವಸಂತಕ್ಕೆ ಕಾಲಿಡುತ್ತಿದ್ದು, ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಐರಾ ಬೇಬಿಯ ಹುಟ್ಟು ಹಬ್ಬದ ಅಂಗವಾಗಿ ರಾಧಿಕ ಪಂಡಿತ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಗಳು ನಗುತ್ತಿರುವ ಫೋಟೊಗಳನ್ನು ಹಾಕಿ ನಮ್ಮ ಜೀವನದಲ್ಲಿ ನೀನು ನಮಗೆ ಖುಷಿ ಬಿಟ್ಟು ಬೇರೇನೂ ನೀಡಿಲ್ಲ. ನಮ್ಮ ಪುಟ್ಟ ದೇವತೆಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದು ಜೊತೆಗೆ ಬೇಗ ಬೆಳೆಯಬೇಡ ಎಂದು ಬರೆದುಕೊಂಡಿದ್ದಾರೆ.











