ಮೂಡಿಗೆರೆ : ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಕಾರು-ಇಬ್ಬರಿಗೆ ಗಂಭೀರ ಗಾಯ…

513
firstsuddi

ಕೊಟ್ಟಿಗೆಹಾರ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪ್ರಪಾತಕ್ಕೆ ಉರುಳಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾರ್ಮಾಡಿ ಘಾಟ್‍ನಲ್ಲಿ ನಡೆದಿದೆ.
ತರೀಕೆರೆಯ ರಾಕೇಶ್, ಸಂತೋಷ್, ಶಿವು, ಅಭಿಜಿತ್ ಹಾಗೂ ಹಾಲೇಶ್ ಎಂಬುವವರು ತರೀಕೆರೆಯಿಂದ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೊರಟ್ಟಿದ್ದು ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟ್‍ನ ಆಲೇಕಾನ್ ಹಾಗೂ ಬಿದಿರುತಳ ಮಧ್ಯ ಭಾಗದಲ್ಲಿ ಸುಮಾರು 100 ಅಡಿ ಪ್ರಪಾತಕ್ಕೆ ಕಾರು ಉಳಿದಿದೆ. ಉರುಳಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಲೇಶ್ ಎಂಬುವವರ ಕಾಲಿನ ಮೂಳೆ ಮುರಿದಿದ್ದು, ರಾಕೇಶ್ ಎಂಬುವವರಿಗೆ ಬೆನ್ನಿಗೆ ಗಾಯವಾಗಿದೆ. ಕಾರಿನಲ್ಲಿದ್ದ ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಇಂದು ಬೆಳಿಗ್ಗಿನ ಜಾವ ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ಆರೀಫ್, ಪೋಲಿಸ್ ಸಿಬ್ಬಂದಿ ಸಚ್ಚಿನ್, ಅರಣ್ಯ ಇಲಾಖೆಯ ಬಸವರಾಜ್ ಪ್ರಪಾತಕ್ಕೆ ಉರುಳಿದ ಕಾರಿನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಹಗ್ಗದ ಸಹಾಯದಿಂದ ಮೇಲೆ ಕರೆತಂದರು. ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು.