ನವದೆಹಲಿ: ಸತತ ಏಳು ದಿನಗಳವರೆಗೆ ಸ್ಥಿರವಾಗಿ ಉಳಿದಿದ್ದ ಪೆಟ್ರೋಲ್ ಮತ್ತು ಡೀಸೆಲ್‍ನ ಬೆಲೆ ಇಂದು ಏರಿಕೆ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯನ್ನು 35 ಪೈಸೆ ಹೆಚ್ಚಿಸಲಾಗಿದ್ದು, ಲೀಟರ್ ಗೆ 86.65 ರೂ.ತಲುಪಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ. ಇಂಧನ ಬೆಲೆಗಳು ಪ್ರತಿ ಲೀಟರ್‌ಗೆ 35 ಪೈಸೆಗಳಷ್ಟು ಹೆಚ್ಚಾಗಿದ್ದು, ಅವುಗಳ ಸ್ಥಳೀಯ ಸುಂಕವನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆ ಮೂಲಕ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 86.65 ರೂ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ಕೂಡ ಲೀಟರ್‌ಗೆ 35 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಲೀಟರ್‌ಗೆ. 76.83ಕ್ಕೆ ಏರಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್‍ಗೆ 93.18ರೂ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 83.65ರೂಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್‍ಗೆ 87.99ರೂ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 80.39ರೂಗೆ ಏರಿಕೆಯಾಗಿದೆ. ಚೆನ್ನೈ ನಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್‍ಗೆ 89.11ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 82.03ರೂಗೆ ಏರಿಕೆಯಾಗಿದೆ. ಹೈದರಾಬಾದ್ ನಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್ 90.08ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 83.79ರೂಗೆ ಏರಿಕೆಯಾಗಿದೆ.
ಕೇರಳದ ತಿರುವನಂತಪುರದಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್‍ಗೆ 88.51ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 82.63ರೂಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್ 89.52ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ 81.42 ರೂಗೆ ಏರಿಕೆಯಾಗಿದೆ.










