ಮೂಡಿಗೆರೆ :ಸ್ಪರ್ಧಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಮಗ್ರ ಅಧ್ಯಯನ ಮಾಡುವುದು ಮುಖ್ಯವಾಗಿದೆ : ಪಿಎಸ್‍ಐ ಮಂಜಯ್ಯ.

143
First Suddi

ಕೊಟ್ಟಿಗೆಹಾರ : ಇತಿಹಾಸ, ರಾಜ್ಯಶಾಸ್ತ್ರ, ಸಮಕಾಲೀನ ವಿಚಾರಗಳು ಇಂದಿನ ಸ್ಪರ್ಧಾ ಪರೀಕ್ಷೆಯಲ್ಲಿ ಹೆಚ್ಚಿರುವುದರಿಂದ ವಿದ್ಯಾರ್ಥಿಗಳು ಸಮಗ್ರ ಅಧ್ಯಯನ ಮಾಡುವುದು ಮುಖ್ಯವಾಗಿದೆ ಎಂದು ಕಳಸ ಠಾಣೆಯ ಪಿಎಸ್‍ಐ ಎ.ಬಿ ಮಂಜಯ್ಯ ಹೇಳಿದರು.
ಕೊಟ್ಟಿಗೆಹಾರದಲ್ಲಿ ಭಾನುವಾರ ಸ್ಪೂರ್ತಿ ಮಿತ್ರ ಮಂಡಳಿಯ ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಗಳನ್ನು ಎದುರಿಸಲು ಇಂದು ಮಾರ್ಗದರ್ಶಕರ ಕೊರತೆ ಎದುರಾಗಿದೆ. ನಿರಂತರ ಅಭ್ಯಾಸದಿಂದ ಮಾತ್ರ ಯಶಸ್ಸು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರಂಭಿಸಿರುವ ಈ ಗ್ರಂಥಾಲಯದ ಪ್ರಯೋಜನವನ್ನು ಪರೀಕ್ಷಾರ್ಥಿಗಳು ಪಡೆದುಕೊಳ್ಳಿ ಎಂದರು.
ತರುವೆ ಗ್ರಾ.ಪಂ ಅಧ್ಯಕ್ಷೆ ರವಿಕಲಾ ಪೈ ಮಾತನಾಡಿ, ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆಗೆ ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿನ ಪುಸ್ತಕಗಳ ಪ್ರಯೋಜನ ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪುಸ್ತಕಗಳು, ಮಾಹಿತಿಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಈ ಕೊರತೆಯನ್ನು ಈ ಗ್ರಂಥಾಲಯ ನೀಗಿಸಲಿ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಮಂಜುನಾಥ್, ಶಿಕ್ಷಕ ಭಕ್ತೇಶ್, ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ, ಬಣಕಲ್ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ ಭರತ್, ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಹೋಬಳಿ ಅಧ್ಯಕ್ಷ ವಸಂತ್ ಹಾರ್‍ಗೋಡು, ಬಾಳೂರು ಗ್ರಾ.ಪಂ ಉಪಾಧ್ಯಕ್ಷ ಬಿ.ಬಿ ಮಂಜುನಾಥ್, ಸ್ಫೂರ್ತಿ ಮಿತ್ರ ಮಂಡಳಿಯ ಗೌರವ ಸಲಹೆಗಾರ ಜಯಪಾಲ್ ಬಿನ್ನಡಿ, ಸಂದೀಪ್, ರಾಮಯ್ಯ, ಅವಿನಾಶ್, ಪೂರ್ಣೆಶ್, ಮಂಜುನಾಥ್, ಸತೀಶ್, ಪರೀಕ್ಷಿತ್ ಜಾವಳಿ, ಟಿ.ಎ ಖಾದರ್, ಪ್ರಭಾಕರ್ ಬಿನ್ನಡಿ, ಪ್ರದೀಪ್ ರಾಜ್, ರಜತ್ವ, ಹಸೇನ, ವಿಶ್ವನಾಥ್ ಮುಂತಾದವರು ಇದ್ದರು.