ಬೆಂಗಳೂರು : ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆವರು, ಬೀದಿ ಬೀದಿಯಲ್ಲಿ ಪೋಲಿ ಪುಂಡರು ಹಣ ಸಂಗ್ರಹಿಸುತ್ತಿದ್ದಾರೆ. ಅವರಿಗೆ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿದವರು ಯಾರು?. ಅವರು ಹಣ ಸಂಗ್ರಹಿಸಿ ರಾಮ ಮಂದಿರ ನಿರ್ಮಾಣಕ್ಕೆ ಕೊಡುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಾವು ಚಿಲ್ಲರೆ ರಾಜಕಾರಣ ಮಾಡಿಕೊಂಡು ಬಂದವರಲ್ಲ. ನಾವು ಸ್ವಾಭಿಮಾನದಿಂದ ಬದುಕಿದ್ದೇವೆ. ಯಾವುದೇ ಕಾರಣಕ್ಕೂ ಬೆಂಕಿ ಹಚ್ಚುವ ಕೆಲಸ ಮಾಡುವವರಲ್ಲ, ಅದು ನಮ್ಮ ಸಂಸ್ಕøತಿಯೂ ಅಲ್ಲ. ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇಲ್ಲದಂತಾಗಿದೆ. ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದರೂ ಲೆಕ್ಕವನ್ನು ಕೊಡುತ್ತಿದ್ದಾರಾ? ಲೇಬಲ್ ಇಲ್ಲದೇ ಹಲವಾರು ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಿ ಎಂದು ನಾನು ಹೇಳಿದ್ದು, ನಾನು ಹೇಳಿರುವುದರಲ್ಲಿ ಏನಾದರು ತಪ್ಪು ಇದೆಯಾ ಎಂದು ಪ್ರಶ್ನಿಸಿದ್ದಾರೆ.
ದೇವರ ಅನುಗ್ರಹದಿಂದ ಪ್ರಧಾನಿಯಾಗಿದ್ದೇನೆಂದು ನಮ್ಮ ತಂದೆಯವರು ಶೃಂಗೇರಿಯಲ್ಲಿ ದೇವರ ಸಮ್ಮಖದಲ್ಲಿ ಹೇಳಿದ್ದಾರೆ. ನಾನು ಸಮಾಜ ಒಡೆಯುವುದಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಪಾರದರ್ಶಕವಿಲ್ಲದೆ ದೇಣಿಗೆ ಸಂಗ್ರಹ ನಿಲ್ಲಿಸುವಂತೆ ಆಗ್ರಹಿಸುತ್ತೇನೆ. ಪಾರದರ್ಶಕವಾಗಿ ಎಷ್ಟು ದೇಣಿಗೆಯನ್ನಾದರೂ ಸಂಗ್ರಹಿಸಲಿ ಆದರೆ ರಾಮನ ಹೆಸರಿನಲ್ಲಿ ದುರ್ಬಳಕೆಯಾಗಬಾರದೆಂದು ಮಾತನಾಡಿದರು.










