ಬರ್ಲಿನ್ : ಮಾಸ್ಕ್ ಮರೆತಿದ್ದಕ್ಕೆ ಒಂದು ಕ್ಷಣ ತಬ್ಬಿಬ್ಬಾದ ಚಾನ್ಸಲರ್ ಆಂಜೆಲಾ ಮಾರ್ಕೆಲ್.

102
First Suddi

ಬರ್ಲಿನ್ : ಅಧಿವೇಶನದಲ್ಲಿ ಮಾಸ್ಕ್ ಮರೆತಿದ್ದಕ್ಕೆ ಚಾನ್ಸಲರ್ ಆಂಜೆಲಾ ಮಾರ್ಕೆಲ್ ಅವರು ಒಂದು ಕ್ಷಣ ತಬ್ಬಿಬ್ಬಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶುಕ್ರವಾರದಂದು ಸಂಸತ್ ಉದ್ದೇಶಿಸಿ ಮಾತನಾಡಿದ ಮಾರ್ಕೆಲ್ ಅವರು ಭಾಷಣದ ವೇಳೆ ತಮ್ಮ ಮಾಸ್ಕ್ ಅನ್ನು ತೆಗೆದು ಭಾಷಣದ ಟೇಬಲ್ ಮೇಲಿಟ್ಟಿದ್ದರು. ಭಾಷಣದ ಬಳಿಕ ಅದನ್ನು ಮರೆತು ತಮ್ಮ ಸ್ಥಾನಕ್ಕೆ ಬಂದು ಆಸೀನರಾದರು. ಫೈಲ್ ಟೇಬಲ್ ಮೇಲಿಟ್ಟು ಕುಳಿತ ನಂತರ ತಾವು ಮಾಸ್ಕ್ ಪೊಡಿಯಮ್ ಮೇಲೆ ಮರೆತಿರೋದು ಜ್ಞಾಪಕಕ್ಕೆ ಬಂದಿದೆ. ಒಂದು ಕ್ಷಣ ತಬ್ಬಿಬ್ಬಾದ ಮಾರ್ಕೆಲ್ ಅವರು ಓಡಿ ಹೋಗಿ ಪೊಡಿಯಮ್ ಮೇಲಿದ್ದ ಮಾಸ್ಕ್ ತೆಗೆದುಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಸ್ಥಳೀಯ ನ್ಯೂಸ್ ಏಜೆನ್ಸಿ ಈ ವೀಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದ್ದು, ಈ ವೀಡಿಯೋ 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ ಎನ್ನಲಾಗಿದೆ.