ನಾಲ್ವರು ರೌಡಿಶೀಟರ್ ಗಳು ಸೇರಿ 11 ಆರೋಪಿಗಳ ಬಂಧನ : ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದ ಸಿಸಿಬಿ…

115
First Suddi

ಬೆಂಗಳೂರು : ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ನಿನ್ನೆ ತಡರಾತ್ರಿ ನಾಲ್ವರು ರೌಡಿ ಶೀಟರ್ ಗಳು ಸೇರಿ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಹರೀಶ್, ವೆಂಕಟೇಶ್, ವಿಶ್ವನಾಥ್ ಭಂಡಾರಿ, ಕಿರಣ್ ಗೌಡ, ಸತೀಶ್, ಹೇಮಂತ್, ಗಣೇಶ್ ಎನ್, ಗಣೇಶ್ ಟಿ, ವಿನೋದ್, ಕಿರಣ್ ಕುಮಾರ್ ಹಾಗೂ ಅಣ್ಣಾಮಲೈ ಬಂಧಿತ ಆರೋಪಿಗಳು. ಬಂಧಿತರಿಂದ 18 ಲಾಂಗ್ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಜಾಪುರದ ವೆಂಕಟೇಶ್, ಆನೇಕಲ್ ಹರೀಶ್, ಉಲ್ಲಾಳದ ವಿಶ್ವನಾಥ ಭಂಡಾರಿ, ಮಂಗಳೂರಿನ ಕಿರಣ್ ಗೌಡ ಬಂಧಿತ ರೌಡಿಶೀಟರ್ ಗಳಾಗಿದ್ದಾರೆ.

ಹಳೆ ದ್ವೇಷದ ಹಿನ್ನೆಲೆ ಎದುರಾಳಿ ಗುಂಪಿನವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 11 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.