ಲಾಸ್ ಏಂಜಲೀಸ್ : ಖ್ಯಾತ ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ರೋಲಿಂಗ್ ಹಿಲ್ಸ್ ಎಸ್ಟೇಟ್ ಮತ್ತು ರಾಂಚೊ ಪಾಲೋಸ್ ವರ್ಡೆಸ್ನ ಗಡಿಯಲ್ಲಿರುವ ಲಾಸ್ ಏಂಜಲೀಸ್ನ ದಕ್ಷಿಣಕ್ಕೆ ಸುಮಾರು 20 ಮೈಲಿ ದೂರದಲ್ಲಿ ನಿನ್ನೆ ಬೆಳಗ್ಗೆ 7: 15ಕ್ಕೆ ಸಂಭವಿಸಿದೆ. ಕಾರು ಟೈಗರ್ ವುಡ್ಸ್ ಅವರ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಈ ವೇಳೆ ಕಾರಿನಲ್ಲಿದ್ದ ಟೈಗರ್ ವುಡ್ಸ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಟೈಗರ್ ವುಡ್ಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವುಡ್ಸ್ ಅವರ ಕಾರು ಸಂಪೂರ್ಣ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.










