ಮೈಸೂರು : ಅಣ್ಣ-ತಮ್ಮಂದಿರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಚ್ ಡಿ ಕೋಟೆ ತಾಲ್ಲೂಕಿನ ಎಲೆ ಹುಂಡಿ ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ್(28) ಮತ್ತು ಹರೀಶ್(26) ಮೃತ ಸೋದರರು. ರೈತನಾಗಿದ್ದ ಹರೀಶ್ ಟ್ರ್ಯಾಕ್ಟರ್ ಚಾಲಕನಾಗಿದ್ದನು. ಹರೀಶ್ ಟ್ರ್ಯಾಕ್ಟರ್ ವೇಗವಾಗಿ ಚಲಾಯಿಸುತ್ತಿದ್ದರಿಂದ ತಂದೆ ಚಿನ್ಮಯಿಗೌಡ ಬುದ್ಧಿ ಹೇಳಿದ್ದರು. ಇತ್ತ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ತಮ್ಮನಿಗೆ ಕರೆ ಮಾಡಿ ನಿಧಾನವಾಗಿ ಟ್ರ್ಯಾಕ್ಟರ್ ಚಲಾಯಿಸುವಂತೆ ತಿಳಿ ಹೇಳಿದ್ದರು. ಆತ್ಮೀಯ ಅಣ್ಣ ತನಗೆ ಬೈದನೆಂದು ಮನನೊಂದ ಹರೀಶ್ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತ ತಮ್ಮನ ಸಾವಿನ ಫೋಟೋಗಳು ಮೊಬೈಲ್ ಗೆ ಬಂದಿದ್ದು, ಫೋಟೋ ನೋಡಿ ಆಘಾತಕ್ಕೊಳಾದ ವೆಂಕಟೇಶ್, ನನ್ನಿಂದಲೇ ತಮ್ಮನ ಸಾವು ಆಯ್ತು ಎಂದು ನೊಂದು ಊರಿಗೆ ಬರುವ ಬದಲು ತುಂಬುಸೋಗೆ ಬಳಿಯ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಕ್ಕ-ಪಕ್ಕದಲ್ಲಿ ಸೋದರರ ಅಂತ್ಯಕ್ರಿಯೆ ಮಾಡಲಾಗಿದೆ.










