ಬಾಲಕೋಟ್ ವಾಯುದಾಳಿಗೆ ಎರಡು ವರ್ಷ : ಅಭಿನಂದನೆ ಸಲ್ಲಿಸಿದ ರಕ್ಷಣಾ ಸಚಿವ…

107
Firstsuddi

ನವದೆಹಲಿ : ಬಾಲಕೋಟ್ ವಾಯುದಾಳಿಯ ಎರಡನೇ ವಾರ್ಷಿಕೋತ್ಸವದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ವಾಯುಪಡೆಯ ಶ್ರದ್ಧೆ ಹಾಗೂ ಅಸಾಧಾಣ ಧೈರ್ಯಕ್ಕೆ ಅಭಿನಂದಿಸಿದ್ದಾರೆ.

ಭಾರತವನ್ನು ಸುರಕ್ಷಿತವಾಗಿಡುವ ನಮ್ಮ ಭಾರತೀಯ ಪಡೆಗಳ ಬಗ್ಗೆ ನಮಗೆ ದೃಢವಾದ ಹೆಮ್ಮೆ ಇದೆ ಎಂದು ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ

ಫೆಬ್ರವರಿ 14 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಬಳಿಯ ಜಮ್ಮು – ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ಪಿಎಫ್ ಪಡೆಯ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಷ್-ಎ-ಮೊಹಮ್ಮದ್ (ಜೆಎಂ) ದಾಳಿ ನಡೆಸಿ 40 ಯೋಧರು ಹುತಾತ್ಮರಾಗಿದ್ದರು.

ಕೆಲವು ದಿನಗಳ ನಂತರ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೆಎಂ ಶಿಬಿರದ ಮೇಲೆ ಐಎಎಫ್ ಫೆಬ್ರವರಿ 26 ರ ಮುಂಜಾನೆ ವಾಯುದಾಳಿ ನಡೆಸಲಾಯಿತು. ಇದಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ಪಡೆ ಗುರಿಯಾಗಿಸಿಕೊಂಡು ಮರುದಿನ ಆಕ್ರಮಣ ನಡೆಸಲು ಮುಂದಾದ ಪಾಕಿಸ್ತಾನದ ಪ್ರಯತ್ನಗಳು ನಮ್ಮ ಯೋಧರ ಕಾರ್ಯಾಚರಣೆಯಿಂದ ವಿಫಲವಾಯಿತು.

ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರು ಮಿಗ್ -21 ಬೈಸನ್ ಯುದ್ಧ ವಿಮಾನವನ್ನು ಹಾರಿಸುತ್ತಾ, ಪಾಕಿಸ್ತಾನದ ಜೆಟ್‌ಗಳನ್ನು ಬೆನ್ನಟ್ಟುತ್ತಾ ಬಂದರು. ಪಿಒಕೆ ದಾಟಿ ಹೋಗಿ ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿತು. ಅವರನ್ನು ಪಾಕಿಸ್ತಾನ ವಶಕ್ಕೆ ತೆಗೆದುಕೊಂಡಿತು.