ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸಾಗಿಸುತ್ತಿದ್ದ ಮಹಿಳೆ ಪೊಲೀಸ್ ವಶಕ್ಕೆ!

105
Firstsuddi

ಕೋಯಿಕ್ಕೋಡ್ : ಕೇರಳದ ಕೋಯಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರೀ ಪ್ರಮಾಣದ 100 ಜಿಲೆಟಿನ್ ಕಡ್ಡಿ ಹಾಗೂ 350 ಡಿಟೋನೇಟರ್ ಗಳನ್ನು ಆರ್‌ಪಿಎಫ್ ಪೊಲೀಸರು ವಶ ಪಡಿಸಿಕೊಂಡಿದ್ದು, ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ತಿರುವಣ್ಣಾಮಲೈ ಮೂಲದ ರಮಣಿ ಎಂದು ಗುರುತಿಸಲಾಗಿದ್ದು, ಸ್ಫೋಟಕಗಳನ್ನು ರೈಲಿನ ಸೀಟ್ಗಳ ಅಡಿ ಅಡಗಿಸಿಟ್ಟು ಸಾಗಿಸುತ್ತಿದ್ದಳು. ಮಹಿಳೆಯನ್ನು ಸ್ಫೋಟಕ ವಸ್ತುಗಳ ಸಮೇತ ಆರ್‌ಪಿಎಫ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮಹಿಳೆ ಬಾವಿಗಳನ್ನು ತೆಗೆಯಲು ಜಿಲೆಟಿನ್ ಕಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.