ಮಣ್ಣು ಅಗೆಯುವಾಗ ಗುಡ್ಡ ಕುಸಿತ : ಇಬ್ಬರ ದುರ್ಮರಣ…

105
Firstsuddi

ಬೆಳಗಾವಿ : ಮಣ್ಣು ಅಗೆಯುವಾಗ ಗುಡ್ಡ ಕುಸಿದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಿರನೋಳಿ ಗ್ರಾಮದ ಕೆಂಪಗುದ್ದಿ ಗುಡ್ಡದ ಸಮೀಪ ನಡೆದಿದೆ.

ಮೃತರನ್ನು ಬಿರನೋಳಿ ಗ್ರಾಮದ ಯಲ್ಲಪ್ಪಾ ಹರಿಜನ (22) ಹಾಗೂ ಹಾಲಪ್ಪಾ ಗುರವ (24) ಎಂದು ಗುರುತಿಸಲಾಗಿದೆ.
ಈ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ – 4ರ ರಸ್ತೆಗೋಸ್ಕರ ಕೆಂಪು ಮಣ್ಣು ತೆಗೆಯಲಾಗಿದೆ. ಮಣ್ಣಿನ ದಿಣ್ಣೆಗಳು ಉಳಿದಕೊಂಡಿತ್ತು. ಇದನ್ನು ತಮ್ಮ ಸ್ವಂತ ಕೆಲಸಕ್ಕೆ ಮಣ್ಣು ತೆಗೆಯುವಾಗ ಗುಡ್ಡ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಯಮಕನಮರಡಿ ಪಿಎಸ್ಐ ರಮೇಶ ಪಾಟೀಲ ಅವರು ಭೇಟಿ ನೀಡಿದ್ದು, ಓರ್ವ ಯುವಕನ ಶವ ಹೊರ ತೆಗೆದಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.