ಬೆಂಗಳೂರು : ವಿಧಾನಸಭೆ ಬಜೆಟ್ ಅಧಿವೇಶನ ಇಂದು ಆರಂಭಗೊಂಡಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಷಣ ಮಾಡುತ್ತಿರುವಾಗಲೇ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಚರ್ಚೆ ವಿರೋಧಿಸಿ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದಾಗಿ ಅಧಿವೇಶನದಲ್ಲಿ ಕೋಲಾಹಲ ಉಂಟಾದ ಪರಿಣಾಮ 15 ನಿಮಿಷಗಳ ಕಾಲ ಅಧಿವೇಶನವನ್ನು ಸ್ಪೀಕರ್ ಕಾಗೇರಿ ಅವರು ಮುಂದೂಡಿದರು.










