ಬೆಂಗಳೂರು : ಕೃಷಿ ಇಲಾಖೆಗೆ ರಾಯಭಾರಿಯಾಗಿ ನಟ ದರ್ಶನ್ ನೇಮಕ…

107
Firstsuddi

ಬೆಂಗಳೂರು : ರಾಜ್ಯ ಕೃಷಿ ಇಲಾಖೆಯ ರಾಯಬಾರಿಯಾಗಿ ನಟ ದರ್ಶನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ನಟ ದರ್ಶನ್ ಅವರಿಗೆ ಅಧಿಕಾರ ನೀಡಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಇದು ಅಪರೂಪದ ವಿಶೇಷ ಕಾರ್ಯಕ್ರಮವಾಗಿದ್ದು, ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆ ರಾಯಬಾರಿಯಾಗಲು ಒಪ್ಪಿದ್ದಕ್ಕೆ ನಾಡಿನ ಸಮಸ್ತ ಜನತೆ ಪರವಾಗಿ ಅಭಿನಂದಿಸುತ್ತೇನೆ. ದರ್ಶನ್ ಅವರ ಜನಪ್ರಿಯತೆ ದೊಡ್ಡ ಮಟ್ಟದ್ದಿದೆ ಎಂದರು.

ಬಳಿಕ ದರ್ಶನ್ ಅವರು ಮಾತನಾಡಿ, ಬಿ.ಸಿ ಪಾಟೀಲ್ ಅವರು ಮೊದಲು ಪೊಲೀಸ್, ನಂತರ ಸಿನಿಮಾ ಮಾಡಿದರು ಈಗ ರಾಜಕಾರಣದಲ್ಲಿದ್ದಾರೆ. ಅವರು ಇದೆಲ್ಲಾ ಮಾಡ್ತಾ ಇರೋದು ಜನರಿಗಾಗಿ. ನಾನು ಹೆಚ್ಚೇನೂ ಮಾಡುತ್ತಿಲ್ಲ. ರೈತರ ಸವಲತ್ತುಗಳನ್ನು ಜನರಿಗೆ ಜಾಹೀರಾತು ಮೂಲಕ ತಿಳಿಸುತ್ತಾ ಇದ್ದೇನೆ ಅಷ್ಟೇ. ರೈತರೊಂದಿಗೆ ಭಾವನಾತ್ಮಕವಲ್ಲ, ರಕ್ತ ಸಂಬಂಧವಿದೆ. ಇದಕ್ಕೆ ನಾನು ಶ್ರಮಿಸುತ್ತೇನೆ ಎಂದರು.