ಅನಾವಶ್ಯಕವಾಗಿ ಕೋರ್ಟ್ ಗೆ ಹೋಗುವುದು ಒಳ್ಳೆಯದಲ್ಲ : ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ.

122
Firstsuddi

ಬೆಂಗಳೂರು : ಆರು ಸಚಿವರು ಕೋರ್ಟ್ ಮೊರೆ ಹೋಗಿರುವ ಹಿನ್ನಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ರಾಜಕೀಯ ದೊಂಬರಾಟದಲ್ಲಿ ಸಿಡಿಗಳು ತನ್ನದೇ ಪ್ರಭಾವ ಬೀರುವುದನ್ನು ನೋಡುತ್ತಿದ್ದೇವೆ. ಸ್ವಲ್ಪ ಮಟ್ಟಿಗೆ ಮುಜುಗರ ಹೌದು, ಇಲ್ಲಾ ಅಂತಾ ಹೇಳುತ್ತಿಲ್ಲ. ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಅಂದ್ರೆ, ಏನೂ ಬೇಕಾದರೂ ಮ್ಯಾನಿಪುಲೇಟ್ ಮಾಡಬಹುದು. ಆದರೆ ಆಗಿದ್ದೆಲ್ಲವೂ ಮ್ಯಾನಿಪುಲೇಟ್ ಅಂತಾ ಹೇಳುತ್ತಿಲ್ಲ. ತನಿಖೆ ಕಾರ್ಯ ನಡೆಯುತ್ತಿದೆ. ನೈತಿಕತೆಗೆ ಪ್ರಾಮುಖ್ಯತೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ನೈತಿಕತೆಗೆ ತೊಂದರೆ ಬಂದಾಗ ಸಾಮಾಜಿಕ ವ್ಯವಸ್ಥೆ ಕೂಡ ಅಳಿವಿನ ಅಂಚಿಗೆ ಹೋಗುತ್ತದೆ. ಆಡಳಿತಕ್ಕೂ ಇದು ತೊಂದರೆ ಆಗಬಹುದು ಎಂದು ಹೇಳಿದರು.

ಜಾರಕಿಹೊಳಿ ವಿಚಾರವಾಗಿ ಕೇಂದ್ರದವರು ನಮ್ಮನ್ನು ಕೇಳಿದ್ದರು. ಮಾಧ್ಯಮ ವರದಿ ಆಧಾರಿತವಾಗಿ ನಾವು ಸಹ ವರದಿ ಕೊಟ್ಟಿದ್ದೇವೆ. ವೈಯಕ್ತಿಕವಾಗಿ ಹಲವಾರು ಜನ ಅವರ ಭಾವನೆಗಳನ್ನು ಕೋರ್ಟ್‍ನಲ್ಲಿ ವ್ಯಕ್ತಪಡಿಸಬಾರದು ಅಂತಾ ನಾವು ಮಧ್ಯ ಪ್ರವೇಶ ಮಾಡೋಕೆ ಆಗಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಕೂಡ ತನ್ನ ಭವಿಷ್ಯದ ಯೋಚನೆ ಇರುತ್ತದೆ, ಅದನ್ನು ನೋಡಿಕೊಂಡು ಅವರು ಹೆಜ್ಜೆ ಇಡುತ್ತಾರೆ. ಅದು ಅವರವರಿಗೆ ಬಿಟ್ಟಿದ್ದು, ಆದರೆ ಅನಾವಶ್ಯಕವಾಗಿ ಕೋರ್ಟ್ ಗೆ ಹೋಗುವುದು ಒಳ್ಳೆಯದಲ್ಲ ಅಂತ ತಿಳಿಸಿದರು.