ಹುಬ್ಬಳ್ಳಿ : ರಾಜ್ಯ ರಾಜಕೀಯದಲ್ಲಿ ಸಿಡಿ ಪ್ರಕರಣಗಳು ಉದ್ಭವಿಸುತ್ತವೆ. ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟದ ಬೆನ್ನಲ್ಲೇ ಮಾಜಿ ಶಾಸಕರ ಪುತ್ರನಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆಯ ಮಾಜಿ ಶಾಸಕ ಪುತ್ರನಿಗೆ ಯುವತಿಯೊಬ್ಬಳು ಫೇಸ್ಬುಕ್ ನಲ್ಲಿ ಪರಿಚಯಗಿದ್ದಳು. ನಿತ್ಯ ವಿಡಿಯೋ ಕಾಲ್ ಮಾಡುತ್ತ ಸಲುಗೆಯಿಂದ ಇದ್ದ ಯುವತಿ ಮಾಜಿ ಶಾಸಕರ ಪುತ್ರನನ್ನು ಬಲೆಗೆ ಬೀಳಿಸಿಕೊಂಡಿದ್ದಳು. ವಿಡಿಯೋ ಕಾಲ್ ಮಾಡಿದ ಬಳಿಕ ಮಾಜಿ ಶಾಸಕರ ಮಗನ ಫೋಟೋ ಎಡಿಟ್ ಮಾಡಿದ್ದು, ಈಗ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.
ಹಣ ಕೊಡದಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವದಾಗಿ ಬೆದರಿಕೆ ಹಾಕಿದ್ದಳು. ಇದರಿಂದ ಹೆದರಿದ ಮಾಜಿ ಶಾಸಕನ ಮಗ ಫೋನ್ ಪೇ ಮೂಲಕ 13,200 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೇಸತ್ತ ಮಾಜಿ ಶಾಸಕರ ಪುತ್ರ ಹನಿಟ್ರ್ಯಾಪ್ ಮಾಡಿರುವ ಯುವತಿ, ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾಳೆ ಎಂದು ಸೈಬರ್ ಕ್ರೈಂ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ಎಂದು ನಮೂದು ಮಾಡಿ ದೂರು ದಾಖಲಿಸಿದ್ದಾರೆ.










