ಸುಧಾಕರ್ ಅವರ ‘ಏಕಪತ್ನಿ ವ್ರತಸ್ಥ’ ಹೇಳಿಕೆಗೆ ಬಿದ್ದು ಬಿದ್ದು ನಕ್ಕ ಸೌಮ್ಯ ರೆಡ್ಡಿ.

105
Firstsuddi

ಬೆಂಗಳೂರು : ಸಚಿವ ಸುಧಾಕರ್ ಅವರು ನೀಡಿರುವ ಹೇಳಿಕೆಯಿಂದ ಇಂದು ರಾಜ್ಯ ರಾಜ್ಯಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸುಧಾಕರ್ ಅವರ ‘ಏಕಪತ್ನಿ ವ್ರತಸ್ಥ’ ಹೇಳಿಕೆಗೆ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರು ಬಿದ್ದು ಬಿದ್ದು ನಕ್ಕಿದ್ದಾರೆ.

ವಿಧಾನಸೌಧದಲ್ಲಿ ಸುಧಾಕರ್ ಹೇಳಿಕೆಯನ್ನು ಮೊಬೈಲ್ ನಲ್ಲಿ ಕೇಳಿಸಿಕೊಂಡ ಶಾಸಕಿ ಸೌಮ್ಯರೆಡ್ಡಿಯವರು ಇದು ನಿಜನಾ.. ಹೀಗೆ ಹೇಳಿದ್ದಾರಾ..? ಮಹಿಳೆಯರಿಗೂ ಪತ್ನಿಯರು ಇರುತ್ತಾರಾ..? ಅವರು ಕಾಮಿಡಿ ಮಾಡ್ತಾ ಇದ್ದಾರಾ..? ಎಂದು ಪ್ರಶ್ನಿಸಿ ಇದಕ್ಕೆ ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿ ನಗು ನಗುತ್ತಲೇ ಅಲ್ಲಿಂದ ತೆರಳಿದ್ದಾರೆ.