ಯುವತಿ ನನ್ನ ಭೇಟಿಗೆ ಪ್ರಯತ್ನಿಸಿರಬಹುದು , ಆದರೆ ನನ್ನ ಭೇಟಿಯಾಗಿಲ್ಲ : ಡಿ.ಕೆ.ಶಿವಕುಮಾರ್.

188
firstsuddi

ಬೆಂಗಳೂರು: ಸಿಡಿಯಲ್ಲಿರುವ ಯುವತಿ ನನ್ನ ಭೇಟಿಗೆ ಪ್ರಯತ್ನಿಸಿರಬಹುದು , ಆದರೆ ನನ್ನ ಭೇಟಿಯಾಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಷ್ಟ ಅಂತ ಬಂದರೆ ನಾನು ಖಂಡಿತ ಸಹಾಯ ಮಾಡುತ್ತೇನೆ. ನನ್ನ ಮನೆಯ ಬಳಿ ಸಹಾಯಕ್ಕೆಂದು ಸಾಕಷ್ಟು ಜನ ಬರುತ್ತಾರೆ. ಹಾಗೆಯೇ ಆ ಹೆಣ್ಣು ಮಗಳು ಕೂಡ ನನ್ನ ಭೇಟಿಗೆ ಪ್ರಯತ್ನಿಸಿರಬಹುದು. ನಾವು ಒಬ್ಬ ರಾಜಕಾರಣಿಯಾಗಿ ಕಷ್ಟದಲ್ಲಿದ್ದವರಿಗೆ, ನೊಂದವರಿಗೆ, ಪ್ರಾಮಾಣಿಕವಿದ್ದರೆ ಅವರಿಗೆಲ್ಲ ಸಹಾಯ ಮಾಡುತ್ತೇನೆ. ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ರಕ್ಷಣೆ ಕೊಡುವುದು ಸರ್ಕಾರದ ಕೆಲಸ. ಪೊಲೀಸ್ ಇಲಾಖೆಯಲ್ಲೂ ಒಳ್ಳೆಯ ಅಧಿಕಾರಿಗಳಿದ್ದಾರೆ. ಅವರು ಸೂಕ್ತ ರಕ್ಷಣೆ ಕೊಡುತ್ತಾರೆ. ಯುವತಿ ಪೋಷಕರು ಯಾರ ಜೊತೆ ಇದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅದನ್ನು ನಾನು ಯಾಕೆ ಟ್ರ್ಯಾಕ್ ಮಾಡಲಿ ಎಂದರು. ಇನ್ನು ಮಾಜಿ ಪತ್ರಕರ್ತ ನರೇಶ್ ಗೌಡ ನನಗೆ ಬೇಕಾದ ಹುಡುಗ, ಹಾಗಾಗಿ ಅವನನ್ನು ನಾನು ಭೇಟಿ ಮಾಡಿದ್ದು ನಿಜ ಎಂದು ಹೇಳಿದರು.