ಬೆಂಗಳೂರು:ಕೊರೋನ ವೈರಸ್ ಹೆಚ್ಚಳ ಹಿನ್ನೆಲೆ ಜಿಮ್ ಗಳನ್ನು ಮುಚ್ಚಬೇಕೆಂದು ಇತ್ತೀಚಿಗೆ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಹಿಂಪಡೆಯುವಂತೆ ಜಿಮ್ ಅಸೋಸಿಯೇಷನ್ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ ಶೇ.50ರಷ್ಟು ಅವಕಾಶ ನೀಡಿದೆ.
ಯಾವುದೇ ಸಮಯದಲ್ಲಿ ಜಿಮ್ ಸಾಮರ್ಥ್ಯ 50% ಮೀರಬಾರದು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದೈಹಿಕ ಅಂತರ, ಸ್ಯಾನಿಟೈಸರ್ ಕಡ್ಡಾಯ ಮಾಡಬೇಕು. ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿದರೆ ಜಿಮ್ ಗೆ ಬೀಗ ಹಾಕಲಾಗುವುದು ಎಂದು ಸರಕಾರ ಎಚ್ಚರಿಗೆ ನೀಡಿದೆ.










