ಭೋಪಾಲ್ : ನಡುಬೀದಿಯಲ್ಲಿ ಯುವತಿಯರಿಬ್ಬರು ಪರಸ್ಪರವಾಗಿ ಜುಟ್ಟು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಪನ್ನಾದ ಮಲಾಘನ್ ಗ್ರಾಮದಲ್ಲಿ ನಡೆದಿದೆ.
ಪ್ಯಾಂಟ್ ಶರ್ಟ್ ಹಾಕಿಕೊಂಡಿರುವ ಯುವತಿಯರು ಬೀದಿಯಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಹೊಡೆದಾಡಿಕೊಂಡಿದ್ದಾರೆ ಎಂದರೆ, ಇವರಿಬ್ಬರೂ ಪರಸ್ಪರ ಎಳೆದಾಡುತ್ತಾ ಹೋಗಿ ಕೆಸರು ಗುಂಡಿಗೆ ಬಿದ್ದಿದ್ದಾರೆ. ಅವರ ಮೈಯೆಲ್ಲ ಕಪ್ಪಾದ ಹಾಗೂ ಹೊಲಸು ನೀರಿನಿಂದ ಗಲೀಜಾದರೂ ಸಹ ಪ್ರಜ್ಞೆ ಇರಲಿಲ್ಲ. ಹೊಡೆದಾಟವನ್ನು ಕೆಲವರು ಬಿಡಿಸಲು ಹೋದರು ಜಗಳ ನಿಲ್ಲಿಸಲಿಲ್ಲ. ಮುಖಕ್ಕೆ ಕೊಚ್ಚೆ ತಾಗಿದ್ದರೂ ಅದ್ಯಾವುದನ್ನು ಪರಿಗಣಿಸದೆ ಮುಖ, ಕೈಯನ್ನು ಗಲೀಜು ಮಾಡಿಕೊಂಡು ಜುಟ್ಟು ಬಿಡದೆ ಹೊಡೆದಾಡಿಕೊಂಡ ಈ ಇಬ್ಬರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಷ್ಟೊಂದು ಕೆಟ್ಟದಾಗಿ ಹೊಡೆದಾಡಿಕೊಳ್ಳಲು ಕಾರಣವೇನು? ಎಂಬುವುದು ತಿಳಿದು ಬಂದಿಲ್ಲ. ಆದರೆ ಈ ಇಬ್ಬರ ಜಗಳವನ್ನು ನೋಡಿದ ಹಲವರು ಮಜಾ ತೆಗೆದುಕೊಳ್ಳುತ್ತಿದ್ದರು.










