ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಆಗೋಕೆ ಅಯೋಗ್ಯ : ಕೆ.ಎಸ್.ಈಶ್ವರಪ್ಪ.

112
firstsuddi

ಶಿವಮೊಗ್ಗ : ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಲೆಕೆಟ್ಟು ಹನ್ನೆರಡು ಆಣೆಯಾಗಿದೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಈವರೆಗೆ ಜೀವಂತವಾಗಿದ್ದೇನೆ, ವಿಪಕ್ಷ ನಾಯಕನಾಗಿದ್ದೇನೆಂದು ಸಿದ್ದರಾಮಯ್ಯ ಇಂತಹ ಟೀಕೆ ಮಾಡುತ್ತಾರೆ. ಮುಖ್ಯಮಂತ್ರಿ ಅವರಿಗೆ ಕೋವಿಡ್ ಬಂದ್ರೂ ಆಸ್ಪತ್ರೆಯಲ್ಲಿ ಇದ್ದುಕೊಂಡೆ ಎಲ್ಲಾ ನಿರ್ವಹಣೆ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ರಸ್ತೆಯಲ್ಲಿ ಹೋಗುವ ಕುಡುಕ ಮಾತನಾಡುವ ರೀತಿಯಲ್ಲಿ ಮಾತನಾಡ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದೆ ಎಂಬ ಜ್ಞಾನ ಇಲ್ಲದ ಹಾಗೆ ಮಾತನಾಡ್ತಿದ್ದಾರೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಆಗೋಕೆ ಅಯೋಗ್ಯ, ಮೂಖ್ಯಮಂತ್ರಿ ಆಗೋಕು ಕೂಡ ಅಯೋಗ್ಯ ಈ ಬಗ್ಗೆ ಜನರೇ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಚಿವ ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷಗಳ ಟೀಕೆ ಸರಿಯಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಎಲ್ಲದಕ್ಕೂ ವಿರೋಧ ಮಾಡಿದರೆ ವಿಪಕ್ಷ ಅಂತಾ ಅವರು ಅಂದುಕೊಂಡಿದ್ದಾರೆ ಎಂದು ಹೇಳಿದ ಸಚಿವರು ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿದೆ. ರಾಜ್ಯಪಾಲರೇ ಕೊರೊನಾ ತಡೆಗೆ ಮುಂದಾಗಿದ್ದಾರೆ. ರಾಜ್ಯಪಾಲರು ಮುಂದಾಗಿರುವುದು ಅಚ್ಚರಿ ಅನಿಸುತ್ತಿದೆ. ರಾಜ್ಯಪಾಲರು ಸಭೆ ಕರೆದಿರುವುದು ಒಳ್ಳೆಯದು. ಆದರೆ ಹೊಸ ವ್ಯವಸ್ಥೆ ಆಯಿತೆಂದು ನನಗೆ ಅನಿಸುತ್ತಿದೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.