ಪಿಪಿಇ ಕಿಟ್ ಧರಿಸಿ ಮದುವೆ ಮೆರವಣಿಗೆಯಲ್ಲಿ ಆಂಬ್ಯುಲೆನ್ಸ್ ಚಾಲಕನ ಡ್ಯಾನ್ಸ್!

131
firstsuddi

ಡೆಹ್ರಾಡೂನ್ : ಪಿಪಿಇ ಕಿಟ್ ಧರಿಸಿ ಮದುವೆ ಮೆರವಣಿಗೆಯಲ್ಲಿ ಆಂಬ್ಯುಲೆನ್ಸ್ ಚಾಲರೊಬ್ಬರು ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಾಖಂಡ ರಾಜ್ಯದ ಹಲ್ವಾನಿಯ ತಿವಾರಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿ ಮದುವೆ ಮೆರವಣಿಗೆ ಹೊರಟಿತ್ತು. ಈ ವೇಳೆ ಆಂಬ್ಯುಲೆನ್ಸ್ ಚಾಲಕ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ರೋಗಿಗಳನ್ನು ದಿನದಿತ್ಯ ನೋಡುತ್ತಾ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಉತ್ತರಾಖಂಡ ಮೂಲದ ನೈನಿತಾಲ್ ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕ ಮಹೇಶ್ ಎಂಬುವವರು ಹಲ್ವಾನಿ ಪ್ರದೇಶದಲ್ಲಿ ನಡೆದ ಮದುವೆ ಮೆರವಣಿಗೆಯನ್ನು ಕಂಡು ಮನಸ್ಸಿಗೆ ನೆಮ್ಮದಿಯಾಗುವಷ್ಟು ನೃತ್ಯ ಮಾಡಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ನಲ್ಲಿ ಯಾವುದೇ ರೋಗಿ ಇರಲಿಲ್ಲ ಎಂದು ತಿಳಿದುಬಂದಿದೆ.