ಮೂಡಿಗೆರೆ : ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಮನೆ ದುರಸ್ಥಿ…

211
firstsuddi

ಕೊಟ್ಟಿಗೆಹಾರ:ತಾಲ್ಲೂಕು ಹಾಗೂ ಜಾವಳಿ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಕಲ್ಮನೆಯ ರತ್ನ ಎಂಬುವವರ ಮನೆಯನ್ನು ಶ್ರಮದಾನದ ಮೂಲಕ ದುರಸ್ಥಿ ಮಾಡಲಾಯಿತು.

ರತ್ನ ಅವರ ಮನೆ ಶಿಥಿಲಾವಸ್ಥೆ ತಲುಪಿದ್ದು ಮನೆಯ ಮೇಲ್ಚಾವಣಿಯನ್ನು ತೆಗೆದು ಪಕ್ಕಾಸು, ರೀಪುಗಳನ್ನು ಹಾಕುವ ಮೂಲಕ ದುರಸ್ಥಿ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ವಿಠಲ ಪೂಜಾರಿ, ಸಂಯೋಜಕರಾದ ಪ್ರವೀಣ್ ಪೂಜಾರಿ, ಅರುಣ್ ಪಿಂಟೋ, ಸುರೇಶ್, ಜಾವಳಿ ಘಟಕದ ಸದಸ್ಯರಾದ ದಿನಕರ ಪೂಜಾರಿ, ರಂಜಿತ್, ಅಜಿತ್, ಚಂದ್ರ, ಮದನ್ ಹೆಮ್ಮಕ್ಕಿ, ಚಂದ್ರಶೇಖರ್, ಅಭಿಷೇಕ್, ನಾಗರಾಜಗೌಡ, ವಲಯ ಮೇಲ್ವಿಚಾರಕ ಚಿತ್ತರಂಜನ್, ಸೇವಾ ಪ್ರತಿನಿಧಿಗಳಾದ ಜ್ಯೋತಿ, ಪ್ರೇಮ, ಸುಮತಿ, ವೀರೇಂದ್ರ, ಕಳಸ ವಲಯದ ಅಜಿತ್ ಇದ್ದರು.