ನಾಲ್ಕು ದಿನಗಳ ಕಾಲ ಯಜ್ಞ ಮಾಡಿದರೆ ಕೋವಿಡ್ 3ನೇ ಅಲೆ ಭಾರತವನ್ನು ಮುಟ್ಟುವುದಿಲ್ಲ : ಉಷಾ ಠಾಕೂರ್.

146
firstsuddi

ಭೋಪಾಲ್ : ಕೊರೊನಾಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿರುವ ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಅವರು ಇಂದು ಮತ್ತೊಂದು ಸಲಹೆಯನ್ನು ನೀಡಿದ್ದಾರೆ.

ಇಂದೋರ್ ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಶುದ್ಧೀಕರಣಕ್ಕಾಗಿ, ನಾಲ್ಕು ದಿನ ಯಜ್ಞವನ್ನು ಮಾಡಿ. ಇದನ್ನು ಯಜ್ಞ ಚಿಕಿತ್ಸೆ ಎನ್ನತ್ತಾರೆ. ಹಿಂದಿನ ಕಾಲದಲ್ಲಿ, ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ತೊಡೆದುಹಾಕಲು ಯಜ್ಞ ಚಿಕಿತ್ಸೆ ಮಾಡುತ್ತಿದ್ದರು. ಇದನ್ನು ಮಾಡುವುದರಿಂದ ಕೋವಿಡ್ ಮೂರನೇ ಅಲೆ ಭಾರತವನ್ನು ಟಚ್ ಮಾಡೋಲ್ಲ. ಸದ್ಯ ಭಾರತದಲ್ಲಿ ಎರಡನೇ ಅಲೆ ಹಲವು ಸಮಸ್ಯೆ ಸೃಷ್ಟಿಸುತ್ತಿದ್ದು, ಎರಡನೇ ಅಲೆಯಿಂದ ಭಾರತ ನರಳುತ್ತಿದೆ, ಆರೋಗ್ಯ ಮೂಲ ಸೌಕರ್ಯ ವ್ಯವಸ್ಥೆಯನ್ನೇ ಅಲುಗಾಡಿಸಿದ್ದು, ಫ್ರಂಟ್ ಲೌನ್ ಆರೋಗ್ಯ ಕಾರ್ಯಕರ್ತರ ಮೇಲೆ ಅಧಿಕ ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ.

ತಜ್ಞರ ಪ್ರಕಾರ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಿದೆಯಂತೆ ಇದಕ್ಕಾಗಿ ಮಧ್ಯಪ್ರದೇಶ ಸರ್ಕಾರವು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಾಂಕ್ರಾಮಿಕ ರೋಗವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ಹೇಳಿದರು.