ಕೊರೊನಾಗೆ ತಾಯಿ ಬಲಿ ; ಅಮ್ಮನ ಸಾವಿನ ಸುದ್ದಿ ತಿಳಿದು ಮಗನೂ ಸಾವು..!

148
firstsuddi

ಮಂಡ್ಯ : ತಾಯಿ ಕೊರೊನಾದಿಂದ ಸಾವನ್ನಪ್ಪುತ್ತಿದ್ದಂತೆ, ಇತ್ತ ಮಗನೂ ಕೂಡ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುಭಾಷ್ ನಗರದಲ್ಲಿ ನಡೆದಿದೆ.

ಸುಭಾಷ್ ನಗರದ ನಿವಾಸಿ ಸುಜಾತಾ ಹಾಗೂ ಅವರ ಪುತ್ರ ರಮೇಶ್ ಮೃತಪಟ್ಟವರು. ಸುಜಾತಾ ಅವರಿಗೆ ಮೇ 7 ರಂದು ಸೋಂಕು ದೃಢಪಟ್ಟ ಹಿನ್ನಲೆ ಕೀಲಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ತಾಯಿಗೆ ಕೊರೊನಾ ಬಂದ ದಿನದಿಂದ ಮಗ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತಾಯಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮನೆಯಲ್ಲೇ ರಮೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.