ಕೋವಿಡ್ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ : ನಿರ್ಮಲಾನಂದನಾಥ ಸ್ವಾಮೀಜಿ.

93
firstsuddi

ಮಂಡ್ಯ : ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಎಂದು ಕೋವಿಡ್ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಜನರಿಗೆ ಎಚ್ಚರಿಕೆಯ ಕರೆ ನೀಡಿದ್ದಾರೆ.

ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಶ್ರೀಗಳು, ಕೊರೊನಾದ ಎರಡನೇ ಅಲೆಗೆ ಎರಡು ತಲೆ ಇದೆ. ಒಂದು ಶೀಘ್ರವಾಗಿ ಹರಡುವುದು, ಎರಡನೇಯದ್ದು ವ್ಯಾಕ್ಸಿನ್ ನನ್ನು ತಿಂದು ಅದರ ಪರಿಣಾಮವನ್ನು ಕಡಿಮೆ ಮಾಡುವ ಶಕ್ತಿಯನ್ನು ವೈರಸ್ ಬೆಳೆಸಿಕೊಂಡಿದೆ. ಸದ್ಯ ಕೊರೊನಾ ಮಹಾ ಮಾರಿಗೆ ವ್ಯಾಕ್ಸಿನ್ ಒಂದೇ ಮಾರ್ಗವಾಗಿದೆ. ನಿರ್ಲಕ್ಷ್ಯ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಕೊರೊನಾ ವೈರಸ್ ಆರು ತಿಂಗಳಿಗೆ ವರ್ಷಕ್ಕೆ ತನ್ನ ರೂಪವನ್ನು ಬದಲಿಸಿಕೊಂಡು ಶಕ್ತಿಯನ್ನು ಸಹ ವೃದ್ಧಿಸಿಕೊಳ್ಳುತ್ತಿದೆ. ಯಾವುದೇ ಔಷಧಿಯಿಂದ ಈ ರೋಗ ಪೂರ್ಣ ಪ್ರಮಾಣದಲ್ಲಿ ಗುಣವಾಗುವುದಿಲ್ಲ. ಜನರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಎಲ್ಲರೂ ಸಹ ಕಡ್ಡಾಯವಾಗಿ ಎಸ್ ಎಂಎಸ್ ಸೂತ್ರವನ್ನು ಪಾಲಿಸಬೇಕಾಗಿದೆ. ಎಸ್ ಎಂಎಸ್ ಅಂದ್ರೆ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ನಮ್ಮನ್ನ ಶುದ್ಧವಾಗಿ ಇಟ್ಟುಕೊಳ್ಳುವುದು ಈ ನಿಯಮಗಳನ್ನು ತಪ್ಪದೇ ಪಾಲಿಸಿದರೆ ಕೊರೊನಾ ವೈರಸ್ ಮಾತ್ರವಲ್ಲ ಎಲ್ಲ ವೈರಸ್ನಿಂದ ರಕ್ಷಣೆ ಪಡೆಯಬಹುದು ಎಂದು ಜನರಿಗೆ ಬುದ್ಧಿ ಮತು ಹೇಳಿದರು.