ಶಾಸಕ ಜಮೀರ್ ಅಹ್ಮದ್ ಗೆ ಮುತ್ತಿಟ್ಟ ಅಭಿಮಾನಿ..!

94
firstsuddi

ದೊಡ್ಡಬಳ್ಳಾಪುರ : ನಗರಕ್ಕೆ ಆಗಮಿಸಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಅಭಿಮಾನಿಯೋರ್ವ ಮುತ್ತು ಕೊಟ್ಟಿದ್ದಾನೆ.

ಲಾಕ್ ಡೌನ್ ಸಮಯದಲ್ಲಿ ಬಡವರ ಹಸಿವು ನೀಗಿಸಲು ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ ವೆಂಕಟರಮಣಯ್ಯ ಅವರು ಅನ್ನ ದಾಸೋಹ ಮಾಡುತ್ತಿದ್ದಾರೆ. ಈ ಅನ್ನ ದಾಸೋಹ ವೀಕ್ಷಣೆ ಮಾಡಲು ಜಮೀರ್ ಅಹ್ಮದ್ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಕಾರಿನ ಮೇಲೆ ಜಮೀರ್ ಅಹ್ಮದ್ ಅವರ ಭಾವಚಿತ್ರ ಅಳವಡಿಸಿರುವುದು ಜಮೀರ್ ರವರ ಕಣ್ಣಿಗೆ ಬಿದ್ದಿದೆ, ತಮ್ಮ ಭಾವಚಿತ್ರ ನೋಡಿ ಕಾರಿನಿಂದ ಕೆಳಗಿಳಿದು ಬಂದು ಕಾರಿನ ಚಾಲಕನೊಂದಿಗೆ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಅನೇಕ ಅಭಿಮಾನಿಗಳು ಸುತ್ತುವರೆದು ಸೆಲ್ಫಿ, ಫೋಟೋ ತೆಗೆಸಿಕೊಂಡರು. ಆಗ ಅಲ್ಲೇ ಇದ್ದ ಅಭಿಮಾನಿಯೋರ್ವ ಫೋಟೊ ತೆಗೆಸಿಕೊಂಡ ಬಳಿಕ ಶಾಸಕರ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ.